ಅಲೆದಾಡಲು ಬೆಸ್ಟ್ ಪ್ಲೇಸ್ ‘ಅಂಡಮಾನ್’..!

ಬೆಂಗಳೂರು: ಕಡಲತೀರಗಳಲ್ಲಿ ಕಳೆದು ಹೋಗುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಅಂಡಮಾನ್​ ದ್ವೀಪಗಳು ಉತ್ತಮ ರಜೆಯನ್ನು ಕಳೆಯಲು ಹೇಳಿಮಾಡಿಸಿದ ಸ್ಥಳ.

ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರದ ಸಂಗಮ ಸ್ಥಳದಲ್ಲಿರುವ ಈ ದ್ವೀಪಗಳ ಸಮೂಹವು ಇಂಡೋನೇಷಿಯಾ ದೇಶದ ಆಚೆ ಎಂಬ ಪ್ರದೇಶದಿಂದ ಕೇವಲ 150 ಕಿ.ಮೀ ದೂರದಲ್ಲಿದೆ. ಅಂಡಮಾನ್ ಹಾಗು ನಿಕೋಬಾರ್ ಎರಡು ಪ್ರತ್ಯೇಕವಾದ ದ್ವೀಪ ಸಮೂಹಗಳಾಗಿದ್ದು ಕ್ರಮವಾಗಿ ಉತ್ತರಕ್ಕೂ ಹಾಗು ದಕ್ಷಿಣಕ್ಕೂ ಸ್ಥಿತವಾಗಿವೆ. ಈ ದ್ವೀಪ ಸಮೂಹವನ್ನು ಹಡುಗು ಅಥವಾ ವಿಮಾನ ಪ್ರಯಾಣದ ಮೂಲಕ ಮಾತ್ರ ತಲುಪಬಹುದಾಗಿದೆ.

ಕಡಲತೀರದ ರಜಾದಿನಗಳಲ್ಲಿ ಏಕಾಂತವನ್ನು ಹುಡುಕುವವರಿಗೆ ಅಂಡಮಾನ್ ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ನೈಸರ್ಗಿಕ ಸೌಂದರ್ಯ ಮತ್ತು ನೆಮ್ಮದಿಯ ನಡುವೆ ಸ್ವಲ್ಪ ಸಮಯವನ್ನು ಕಳೆಯಲು ಬಯಸುವವರಿಗೆ ಇದು ಸೂಕ್ತ ಸ್ಥಳವಾಗಿದೆ.

ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಭಾರತದ ಮಹತ್ತರ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಸುತ್ತಲೂ ಸಾಗರದ ಅಗರ್ಭ ಜಲಜೀವರಾಶಿಗಳಿಂದ ತುಂಬಿ ಹೋಗಿರುವ ಈ ಪ್ರದೇಶವು ಪ್ರವಾಸಿಗರಿಗೆ ರೋಮಾಂಚನವನ್ನುಂಟು ಮಾಡುವ ಅನುಭೂತಿಯನ್ನು ಕರುಣಿಸುತ್ತದೆ. ಇಲ್ಲಿ ಹಲವು ಉತ್ತಮವಾದ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವು 300 ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದ್ದರೆ, ಕೆಲವೇ ಕೆಲವು ಮಾತ್ರ ಅವುಗಳ ಸೂಕ್ಷ್ಮ ಸ್ವರೂಪ ಮತ್ತು ದ್ವೀಪಗಳ ಭಾಗಗಳಲ್ಲಿ ವಾಸಿಸುವ ಪ್ರಾಚೀನ ಬುಡಕಟ್ಟು ಜನಾಂಗದವರ ಕಾರಣದಿಂದಾಗಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮುಕ್ತವಾಗಿವೆ.

ಪ್ರವಾಸೋದ್ಯಮ ದೃಷ್ಟಿಕೋನದಿಂದ, ಹ್ಯಾವ್ಲಾಕ್ ಅಂಡಮಾನ್‌ನ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದ್ದು, ಕೆಲವು ವಿಲಕ್ಷಣ ಕಡಲತೀರಗಳಿಗೆ ನೆಲೆಯಾಗಿದೆ. ಹೆಚ್ಚಿನ ಜನರು ಹನಿಮೂನ್‌ಗಾಗಿ ಅಂಡಮಾನ್‌ನ್ನು ಆಯ್ಕೆ ಮಾಡುತ್ತಾರೆ. ಹ್ಯಾವ್ಲಾಕ್ ದ್ವೀಪದಲ್ಲಿ ಕೆಲವು ಅತ್ಯುತ್ತಮ ಕಡಲತೀರಗಳು ಮತ್ತು ಡೈವಿಂಗ್ ಲಭ್ಯವಿದೆ.

ವಿವಿಧ ಪಕ್ಷಿ ಹಾಗೂ ಪ್ರಾಣಿ ಸಂಕುಲಗಳನ್ನೊಳಗೊಂಡ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯವು ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಅಲ್ಲದೇ, ಅಲಂಕಾರಿಕ ಚಿಪ್ಪು ಮೀನು ಮತ್ತು ಸಿಂಪಿಗಳ ಬೃಹತ್ ಮಾರುಕಟ್ಟೆಗೆ ವಿಸಿಟ್ ಮಾಡಲೇಬೇಕು.

ಇಲ್ಲಿ ನೋಡಲೇಬೇಕಾದ ಪ್ರಮುಖ ಆಕರ್ಷಣೆ ಎಂದರೆ ಜಾಲಿ ಬಾಯ್ ದ್ವೀಪ. ಇತರ ದ್ವೀಪಗಳಾದ ಹ್ಯಾವ್​ ಲಾಕ್ ದ್ವೀಪ, ಸಿಕ್ಯೂ ದ್ವೀಪ ಮತ್ತು ವಂದೂರು ಸಾಗರ ಉದ್ಯಾನ. ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ಸಮಯ. ಬೆಂಗಳೂರು, ಚೆನ್ನೈ ಸೇರಿದಂತೆ ದೇಶದ ಮಹಾನಗರಗಳಿಂದ ಇಲ್ಲಿ ವಿಮಾನದ ಮೂಲಕ ಆಗಮಿಸಬಹುದು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!