ಬಾಲಿವುಡ್ ನಟ ಕಾರ್ತೀಕ್ ಆರ್ಯನ್ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದ್ದಾರೆ. ಕರಣ್ ಜೋಹಾರ್ ಸಿನಿಮಾ ದೋಸ್ತಾನ 2 ಹಾಗೂ ಶಾರುಖ್ ಖಾನ್ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆಯ ಫ್ರಡ್ಡಿ ಸಿನಿಮಾಗಳಿಂದ ಹೊರಬಿದ್ದ ಮೇಲೆ ಮತ್ತೊಂದು ಸಿನಿಮಾದಿಂದಲೂ ಹೊರಬಿದ್ದಿದ್ದಾರೆ.
ನಿರ್ದೇಶಕ ಆನಂದ್ ಎಲ್ ರಾಯ್ ಸಿನಿಮಾದಿಂದಲೂ ಹೊರಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಕಾರ್ತೀಕ್ ಅಭಿಮಾನಿಗಳಿಗೆ ಆಶ್ಚರ್ಯದ ಜೊತೆಗೆ ಕೋಪವನ್ನು ತರಿಸಿದೆ.
ಈ ರೀತಿಯ ಬೆಳವಣಿಗೆಗಳಿಂದ ಸುಶಾಂತ್ ಸಿಂಗ್ ಜೀವನದ ರೀತಿಯಲ್ಲೇ ಕಾರ್ತೀಕ್ ಸಿನಿ ಜೀವನವನ್ನು ಹಾಳು ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.