![](https://rajnewskannada.in/wp-content/uploads/2021/02/coronavirus-blue1-1024x576.jpg)
ರಾಜ್ಯದಲ್ಲಿ ಕಳೆದ 24 ಗಂಟೆಯಗಳಲ್ಲಿ 16,604 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ರಾಜಧಾನಿ ಬೆಂಗಳೂರಿನಲ್ಲಿ 3,992 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್ ಸೋಮವಾರ ಟ್ವಿಟ್ ಮಾಡಿ, ಸುಮಾರು ಒಂದು ತಿಂಗಳ ನಂತರ ರಾಜ್ಯದಲ್ಲಿ ಕೊರೊನಾ ಅಬ್ಬರ ಇಳಿಕೆಯಾಗಿದ್ದು, ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ.13.05ಕ್ಕೆ ಇಳಿದರೆ, ಬೆಂಗಳೂರಿನಲ್ಲಿ 7.5ಕ್ಕೆ ಕುಸಿದಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಂದೇ ದಿನ 44,473 ಮಂದಿ ಗುಣಮುಖಿತರಾಗಿದ್ದು, ಬೆಂಗಳೂರಿನಲ್ಲಿ 20,332 ಸೋಂಕಿತರು ಗುಣಮುಖಿತರಾಗಿದ್ದಾರೆ. ರಾಜ್ಯದಲ್ಲಿ 1,22,329 ಮಂದಿಯನ್ನು ಟೆಸ್ಟ್ ಮಾಡಲಾಗಿದ್ದು, ಬೆಂಗಳೂರಿನಲ್ಲಿ 53,061 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.