ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ಪ್ರಮಾಣದಲ್ಲಿ ತೀವ್ರತೆ ದಾಖಲಾಗಿದೆ.
ಬುಧವಾರ ಬೆಳಿಗ್ಗೆ 7.15ರ ಸುಮಾರಿಗೆ ಮೊದಲ ಬಾರಿ ಭೂಕಂಪನ ಸಂಭವಿಸಿದ್ದು, ಅಸ್ಸಾಂನಿಂದ 43 ಕಿ.ಮೀ.ದೂರದ ತೆಜ್ ಪುರ್ ನಲ್ಲಿ ಕೇಂದ್ರೀಕೃತವಾಗಿತ್ತು ಎಂದು ರಾಷ್ಟ್ರೀಯ ಭೂವಿಜ್ಞಾನ ಇಲಾಖೆ ತಿಳಿಸಿದೆ.
ಪ್ರಬಲ ಭೂಕಂಪನದ ನಂತರ 7,55ಕ್ಕೆ ಮತ್ತೊಮ್ಮೆ ಭೂಕಂಪನ ಸಂಭವಿಸಿದೆ. ನಂತರ 8 ಗಂಟೆಗೆ ಮತ್ತೊಮ್ಮೆ ಭೂಮಿ ಅದುರಿದೆ. ಇದರಿಂದ ಅಸ್ಸಾಂನ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.