2017 ರಲ್ಲಿ ನಾಡಗೀತೆಗೆ ಅವಹೇಳನ ಮಾಡಿ ಬರೆದಿರೋದನ್ನ ರೋಹಿತ್ ಚಕ್ರತೀರ್ಥ ಶೇರ್ ಮಾಡಿದ್ರು. ಅವರ ಮೇಲೆ ಹಿಂದಿನ ಸರ್ಕಾರ ಕೇಸ್ ಹಾಕಿ ಅದು ಬಿ ರಿಪೋರ್ಟ್ ಆಗಿತ್ತು. ರೋಹಿತ್ ಚಕ್ರತೀರ್ಥ ನಾನು ಬರೆದಿದಲ್ಲ ಅಂತ ಹೇಳಿದ್ದಾರೆ ಎಂದು ವಿಧಾನಸೌಧ ದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ನಾನು ಸ್ವಾಮೀಜಿಯವರನ್ನು ಭೇಟಿ ಮಾಡಿ ಹೇಳಿದ್ದೇನೆ. ಅವರಿಗೆ ಪಠ್ಯಪುಸ್ತಕ ದ ಒಂದು ಸೆಟ್ ಕೊಟ್ಟಿದ್ದೇನೆ. ಸ್ವಾಮೀಜಿಯವರಿಗೆ ಪಠ್ಯ ಪುಸ್ತಕದ ಬಗ್ಗೆ ಆಕ್ಷೇಪ ಇಲ್ಲ. ನಾಡಗೀತೆಗೆ ಅಪಮಾನ ಮಾಡಿದವನ್ನು ಬಂಧಿಸಲಿ ಅಂದಿದ್ದಾರೆ. ಇದೇ ವೇಳೆ ಬಸವಣ್ಣ ವಿಚಾರದಲ್ಲಿ ಬರಗೂರು ಏನ್ ಹಾಕಿದ್ದರು ನೋಡ್ತಿವಿ. ಹಾಗೇ ಈಗ ಏನಿದೆ ಅನ್ನೋದನ್ನ ನೋಡ್ತಿವಿ. ಬಸವಣ್ಣನವರ ಪಠ್ಯ ಕೈಬಿಟ್ಟಿಲ್ಲ ಎಂದು ತಿಳಿಸಿದ್ರು. ರೋಹಿತ್ ಚಕ್ರತೀರ್ಥ ವಿದ್ಯಾರ್ಹತೆ ವಿಚಾರವಾಗಿ ಮಾತನಾಡಿದ ಅವರು ಪ್ರೋಫೆಸರ್ ಅಂತ ಬಾಯ್ತಪ್ಪಿ ಹೇಳಿರಬಹುದು. ಇದನ್ನೂ ಓದಿ : – ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ – ಇತಿಹಾಸವನ್ನು ಯಾರೂ ತಿದ್ದಬಾರದು – ಯದುವೀರ್ ಒಡೆಯರ್ ಪ್ರತಿಕ್ರಿಯೆ
ಒಂದು ಪದ ಇಟ್ಟುಕೊಂಡು ಕೇಳಬೇಡಿ. ಅವರು ಬೇಸ್ ಇನ್ಸ್ಟಿಟ್ಯೂಟ್ ಅಲ್ಲಿ ಐಐಟಿ ಮತ್ತು ಸಿಇಟಿ ಅಧ್ಯಾಪಕರು. ಮಕ್ಕಳಿಗೆ ಮ್ಯಾಥ್ಸ್ ಹೇಳಿ ಕೊಡುತ್ತಿದ್ದರು. ಯಾವುದನ್ನು ಮಕ್ಕಳು ಓದಬೇಕೋ ಅದು ಪಠ್ಯದಲ್ಲಿ ಇರಬೇಕೇ ಹೊರತು ಯಾವುದೋ ಸಿದ್ದಾಂತ ಇರಬಾರದು. ಅದಕ್ಕಾಗಿಯೇ ನಾವು ಪಠ್ಯಪುಸ್ತಕ ತಿದ್ದುಪಡಿ ಮಾಡಿದ್ದು. ಹೆಡ್ಗೆವಾರ್ ಭಾಷಣದ ಕಾಪಿಯಲ್ಲಿ ಯಾವುದೇ ಸಿದ್ದಾಂತ ಇಲ್ಲ. ನೆಹರೂ ಪತ್ರದಲ್ಲಿ ಯಾವ ಸಿದ್ದಾಂತ ಇತ್ತು ಹಾಗಾದರೆ? ಎಂದು ಪ್ರಶ್ನಿಸಿದ್ರು. ಹೆಡ್ಗೆವಾರ್ ಪ್ರಪಂಚದ ದೊಡ್ಡ ಆರ್ಗನೈಸೇಷನ್ ಸ್ಥಾಪಕರು. ಸಂಘ ಪರಿವಾರದ ಸಿದ್ದಾಂತವನ್ನು ಅದರಲ್ಲಿ ಸೇರಿಸಿಯೂ ಇಲ್ಲ ಎಂದು ನಾಗೇಶ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : – ರಾಜ್ಯಸಭೆಗೆ ಬಿಜೆಪಿಯಿಂದ ಮೂವರು ಸದಸ್ಯರನ್ನ ಕಳಿಸ್ತೇವೆ – ಯಡಿಯೂರಪ್ಪ ಭರವಸೆ