ಪ್ರಯಾಣಿಕರೊಬ್ಬರು ಚಲಿಸುವ ರೈಲು ಹತ್ತುವ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ಜೀವ ರಕ್ಷಣೆ ಮಾಡಿದ ರೈಲ್ವೆ ಪೊಲೀಸ್ ಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ.
21 ಡಿಸೆಂಬರ್ 2019ರಂದು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕೊಲ್ಲಾಪುರ ಹೈದರಾಬಾದ್ ರೈಲುಗಾಡಿ ಹತ್ತುವಾಗ ಬಳ್ಳಾರಿ ಕೇಂದ್ರೀಯ ವಿದ್ಯಾಲಯದ ಶಾಲೆಯ ಶಿಕ್ಷಕಿ, ರಶ್ಮಿ ರೈಲು ಹತ್ತುವ ಸಮಯದಲ್ಲಿ ಬಿಳುತ್ತಿದ್ದರು, ಅದನ್ನು ಗಮನಿಸಿದ ಎಸ್. ಎಂ ರಫೀ ಸಮಯ ಪ್ರಜ್ಞೆ ಯಿಂದ ಶಿಕ್ಷಕಿ ಜೀವ ರಕ್ಷಣೆ ಮಾಡಿದ್ದರು. ಇದನ್ನೂ ಓದಿ : – ಬಸವಣ್ಣನವರ ಪಠ್ಯ ಕೈಬಿಟ್ಟಿಲ್ಲ – ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ
ಈ ಹಿನ್ನೆಲೆಯಲ್ಲಿ ಇವರ ಧೈರ್ಯ ಹಾಗೂ ಸಾಹಸವನ್ನು ಗಮನಿಸಿದ ಕೇಂದ್ರೀಯ ರೈಲ್ವೆ ಇಲಾಖೆ ರಾಷ್ಟ್ರಪತಿ ನೀಡಿದ ಪ್ರಮಾಣ ಪತ್ರ ಮತ್ತು ಮೆಡಲ್ ಹಾಗೂ 1 ಲಕ್ಷ ಚೆಕ್ ವಿತರಣೆ ಮಾಡಿದೆ. ಈ ಪ್ರಶಸ್ತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದ್ದಾರೆ. ಮೇ 27, ರಂದು ದೆಹಲಿಯ ವಿಜ್ಞಾನ ಭವನ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ನೀಡಿ ರಫೀ ಅವರಿಗೆ ಗೌರವಿಸಲಾಗಿದೆ.
ಇದನ್ನೂ ಓದಿ : – ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ – ಇತಿಹಾಸವನ್ನು ಯಾರೂ ತಿದ್ದಬಾರದು – ಯದುವೀರ್ ಒಡೆಯರ್ ಪ್ರತಿಕ್ರಿಯೆ