ಬಸವರಾಜ್ ಹೊರಟ್ಟಿ ಮಾತಿನ ಭರ – ಜಿಲ್ಲಾಧಿಕಾರಿಗೆ ಏಕವಚನದಲ್ಲಿ ಸಂಭೋದನೆ

ಬಸವರಾಜ ಹೊರಟ್ಟಿ (Basavaraj horatti) ಪಿಎಸ್ಐಗೆ (PSI) ಆವಾಜ್ ಹಾಕಿದ ಘಟನೆ ಧಾರವಾಡದ ಶಾರದಾ ಹೈಸ್ಕೂಲ್ನಲ್ಲಿ (Dharwad sharadha high school) ನಡೆದಿದೆ. ಚುನಾವಣಾಧಿಕಾರಿ ಮಾಡಿದ ಆದೇಶವನ್ನು ಪಾಲನೆ ಮಾಡಿ ಮತಕೇಂದ್ರದಿಂದ 200 ಮೀಟರ್ ದೂರದಲ್ಲಿರಿ ಎಂದು ಪಿಎಸ್ಐ ಕವಿತಾ ಹೊರಟ್ಟಿಗೆ ಹೇಳಿದ್ದಾರೆ.

ಈ ವೇಳೆ ಯಾರವನು ಡಿಸಿ ಎಂದು ಪಿಎಸ್ಐಗೆ ಹೊರಟ್ಟಿ ಆವಾಜ್ ಹಾಕಿದ್ದಾರೆ. ಇದೇ ವೇಳೆ ಮತಗಟ್ಟೆ ಹೊರಗಡೆ ಒಂದು ಟೇಬಲ್, ಎರಡು ಚೇರ್ ಹಾಕಿಕೊಳ್ಳಲು ಅವಕಾಶ ಇದೆ, ಜಾಸ್ತಿ ಜನ ಇಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಪಿಎಸ್ಐ ಹೇಳಿದ್ದಾರೆ. ಇದಕ್ಕೆ ಯಾವ ಡಿಸಿ ಅವಾ, ಕಾನೂನು ಪ್ರಕಾರ ನಿಮ್ಮ ಕೆಲಸ ಏನಿದೆ ಅದನ್ನು ಮಾಡಿ. ಎರಡು ಚೇರ್ ಒಂದು ಟೇಬಲ್ ಹಾಕಿಕೊಂಡು ನಮ್ಮವರು ಕುಳಿತುಕೊಳ್ಳುತ್ತಾರೆ ಎಂದು ಹೊರಟ್ಟಿ ಬೇಜವಾಬ್ದಾರಿತನದಿಂದ ಮಾತನಾಡಿದ್ರು.ನಾನು ಬೆಳಿಗ್ಗೆ 8 ರಿಂದ ಮತಗಟ್ಟೆಗಳನ್ನ ತಿರುಗಾಡಿ ಬಂದಿದ್ದೆನೆ, ಶೇಕಡಾ 90 ರಷ್ಡು ಪೋಲಿಂಗ್ ಆಗಬಹುದು ಎಂದು ಬಸವಾರಜ್ ಹೊರಟ್ಟಿ ಹೇಳಿದ್ದಾರೆ. ಇದೇ ವೇಳೆ ಹೊರಟ್ಟಿ ಶಿಕ್ಷಕರನ್ನ ಹೆದರಿಸುತ್ತಾರೆ ಎಂಬ ಪ್ರಶ್ನೆಗೆ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನೇನೂ ಭೂತನಾ ಹೆದರಿಸಲಿಕ್ಕೆ, ನಾನು ಜೆಡಿಎಸ್ (JDS) ಕಾಂಗ್ರೆಸ್ (Congress) ನವರಿಗಿಂತ ಸ್ಮಾರ್ಟ್ ಇದ್ದೀನಿ . 18,000 ಜನ ಶಿಕ್ಷಕರು ಇದಾರೆ , ಅವರನ್ನ ಹೆದರಿಸಲು ಕಾರಣ ಬೇಕಲ್ಲ. ಒಂದೇ ಉದಾಹರಣೆ ಕೋಡಿ ಎಂದು ಹೇಳಿದರು. 42 ವರ್ಷದಿಂದ ಆಯ್ಕೆ ಆಗುತ್ತಾ ಬಂದಿದ್ದೇನೆ. ಒಂದೆ ಒಂದು ಕಪ್ಪು ಚುಕ್ಕಿ ತೋರಿಸಿ ನೋಡೋಣ . ನಾನು ಸಭಾಪತಿ ಆದಾಗ ಇಬ್ಬರು ರಾಜ್ಯಾಪಾಲರು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ ಎಂದು ಹೇಳಿದ್ರು. ಇದನ್ನೂ ಓದಿ : – ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಾನೂನು ಪ್ರಕಾರ ಉತ್ತರ ಕೊಡುತ್ತೇನೆ – ಬಸವರಾಜ ಹೊರಟ್ಟಿ

ಇದೇ ವೇಳೆ, ಜೆಡಿಎಸ್ ಅಭ್ಯರ್ಥಿಯಾಗಿ ನಿಂತವನು ನನ್ನ ಮನೆಯಲ್ಲೆ 13 ವರ್ಷದಿಂದ ಇದ್ದ. ಎನೇನೂ ಲೂಟಿ ಮಾಡಿದ್ದಾನೆ ಹೇಳಬೇಕಾ.? 1.85 ಲಕ್ಷ ಬ್ಯಾಂಕ ಗೆ ಜಮಾ ಆಗಿದೆ. ಗುರಿಕಾರ ಯಾವ ಶಿಕ್ಷರಿಗೆ ಏನ್ ಮಾಡಿದ್ದಾನೆ, ಸಿದ್ದರಾಮಯ್ಯ ಸರಕಾರ ಇದ್ದಾಗ ಗುರಿಕಾರ ಎನ್ ಮಾಡಿದ್ದಾನೆ ಎಂದು ಪ್ರಶ್ನಿಸಿದ್ರು. ನಾನು 7 ಸರಿ ಜಯ ಸಾಧಿಸಲು ಶಿಕ್ಷಕರು ಆರ್ಶಿವಾದ ಮಾಡಿದ್ದಾರೆ, ನಾನೇನೂ ದೇವರಲ್ಲ, ನಾನು ಯಾರ ಕೈ ಕಾಲು ಹಿಡಿದಿಲ್ಲ. ಎಲ್ಲರೂ ಕಾನೂನಿಗೆ ಬೆಲೆ ಕೊಡಬೇಕು ಎಂದು ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ : – ಬಿಜೆಪಿ ಸರ್ಕಾರ ಸೋನಿಯಾಗಾಂಧಿಗೆ ಕಿರುಕುಳ ನೀಡುತ್ತಿದೆ – ಎಂ.ಬಿ.ಪಾಟೀಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!