ಬಿಬಿಎಂಪಿ ಎಲೆಕ್ಷನ್ ಪ್ಲಾನ್ – ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್

ಬಿಬಿಎಂಪಿ ಚುನಾವಣೆ (BBMP Election) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು (Politics) ಗರಿಗೆದರಿವೆ. ಪಾಲಿಕೆ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavarj Bommai) ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಶಾಸಕ ಉದಯ ಗರುಡಾಚಾರ್ (Uday gudachar) , ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (Tushar girinath) ಮತ್ತು ಇತರ ಹಿರಿಯ ಅಧಿಕಾರಿಗಳು ಸಿಎಂ ಜೊತೆಗಿದ್ದರು. ಶಾಂತಿನಗರದಲ್ಲಿ ನಾಗರಿಕ ಜಲಮಾರ್ಗ ಯೋಜನೆ ವೀಕ್ಷಿಸಿದ ನಂತರ ಕೋರಮಂಗಲ ಕಣಿವೆ ಕೆ 100 ಉದ್ಘಾಟಿಸಿದರು. ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ (Narayan nethralaya eye hospital) ತೆರಳಿದ ಸಿಎಂ ನಾರ್ಮಲ್ ಚೆಕಪ್ ಮಾಡಿಸಿಕೊಂಡರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನು ಎರಡು ಮೂರು ತಿಂಗಳಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಲಾಗುವುದು ನಾಗರಿಕ ಕಾಲುವೆ ಯೋಜನೆಯೂ ಶೀಘ್ರ ಆರಂಭವಾಗಲಿದೆ. ಈ ಯೋಜನೆಗೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರೇ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಇದೇ ವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದು, 15 ಸಾವಿರ ಕೋಟಿ ಯೋಜನೆಯ ಸಬ್ ಅರ್ಬನ್ ರೈಲು ಯೋಜನೆಗೆ ಅಡಿಗಲ್ಲು ಹಾಕುತ್ತಾರೆ, ಬೆಂಗಳೂರು ಅಭಿವೃದ್ಧಿಗೆ 8 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಅವರು ಘೋಷಿಸಲಿದ್ದಾರೆ. ಕೃಷ್ಣರಾಜೇಂದ್ರ ಮಾರುಕಟ್ಟೆಗೆ (KR Market) ಭೇಟಿ ನೀಡಿ ಪರಿಶೀಲಿಸಿದ ಅವರು, ಕೆ.ಆರ್.ಮಾರ್ಕೆಟ್ಗೂ ನನಗೂ ಹಳೆಯ ಸಂಬಂಧವಿದೆ. ನನ್ನ ಕೈಗಾರಿಕೆ ಇದೆ. ಎಸ್ಜೆಪಿ ರಸ್ತೆಗೂ ಆಗಾಗ ಬರುತ್ತಿರುತ್ತೇನೆ. ಬಹಳ ಸಂತೋಷದಿಂದ ಚಿಕ್ಕಪೇಟೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ರು.

ಮೆಜೆಸ್ಟಿಕ್ ನಿಂದ ಬೆಳಂದೂರುವರೆಗೂ (Majestic to belenduru) 23 ಕಿಮಿ ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಲಿದೆ. ಬೆಂಗಳೂರಿನ ಬಗ್ಗೆ ದೂರದೃಷ್ಟಿ ಇಟ್ಟುಕೊಂಡಿದ್ದ ಯಡಿಯೂರಪ್ಪನವರು (yediyurappa) ಈ ಯೋಜನೆಗೆ ಅನುದಾನ ನೀಡಿದರು. ಇನ್ನೂ ಎರಡು ಮೂರು ತಿಂಗಳಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ನಾಗರಿಕ ಕಾಲುವೆ ಯೋಜನೆಯನ್ನು ಯಡಿಯೂರಪ್ಪನವರಿಂದಲೇ ಉದ್ಘಾಟನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ : – ಸತತ 8ನೇ ಬಾರಿಗೆ ಪರಿಷತ್ ಪ್ರವೇಶಿಸಿದ ಬಸವರಾಜ್ ಹೊರಟ್ಟಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!