ಬೆಂಗಳೂರಿನಲ್ಲಿ ರಾತ್ರಿ ಶಾಲೆ ಆರಂಭಿಸಲು ಬಿಬಿಎಂಪಿ ಚಿಂತನೆ

ಬಿಬಿಎಂಪಿ (BBMP) ಒಂದಿಲ್ಲೊಂದು ಅವಾಂತರ, ಯಡವಟ್ಟು ಮಾಡಿದ್ರೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಯೋಜನೆಗೆ ಮುಂದಾಗಿದೆ. ಪಾಲಿಕೆಯ 198 ವಾರ್ಡ್ ಗಳಲ್ಲಿ ಶಿಕ್ಷಣ ವಂಚಿತ ಮಕ್ಕಳಿಗೆ ರಾತ್ರಿ ಶಾಲೆ (Night school) ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದೆ.

ಕೂಲಿ ಕಾರ್ಮಿಕರ ಮಕ್ಕಳು, ಬಡ ಕುಟುಂಬದ ಮಕ್ಕಳು ಶಾಲೆಗೆ ಬಾರದೆ ದಿನಗೂಲಿಗೆ ಹೋಗ್ತಿದ್ದಾರೆ. ಇಂತಹವರಿಗಾಗಿ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾದ್ ಮನೋಹರ್ (Ram prasad manohar) ಹೊಸ ಶಿಕ್ಷಣ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ರಾತ್ರಿ ಶಾಲೆ ಆರಂಭಿಸಲು ವಿನೂತನ ಯೋಜನೆಯ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಮುಂದಿಡಲಿದ್ದಾರೆ. ಎಲ್ಲವೂ ನಿಗದಿಯಂತೆ ನಡೆದರೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು (Independence day) ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ಇದೆ. ಪ್ರತಿ ವಾರ್ಡ್ ನ ಸರ್ಕಾರಿ, ಬಿಬಿಎಂಪಿ ಶಾಲೆಗಳಲ್ಲಿ ಕಲಿಕೆ, ಸಂಜೆ 6 ರಿಂದ 9 ಗಂಟೆವರೆಗೆ ಶಾಲೆ ವೇಳಾಪಟ್ಟಿ, ಉಚಿತ ಪಠ್ಯಪುಸ್ತಕ, ಲೇಖನಿ ಸಾಮಗ್ರಿಗಳು, ಸಮವಸ್ತ್ರ ವಿತರಣೆ, ನುರಿತ ಶಿಕ್ಷಕವೃಂದದಿಂದ ಬೋಧನೆ ನೀಡಲಾಗುತ್ತದೆ. ಇದನ್ನೂ ಓದಿ : –  ನ್ಯಾಷನಲ್ ಹೆರಾಲ್ಡ್ ಪ್ರಕರಣ- ಭೋಜನ ವಿರಾಮದ ಬಳಿಕ ರಾಹುಲ್ ವಿಚಾರಣೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!