ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ರೈತರ ಹೊಲಗಳಿಗೆ ಕರಡಿಗಳು ನುಗ್ಗಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನೆಲ್ಲ ನಾಶಮಾಡುತ್ತಿವೆ. ರಾತ್ರಿ ಎನ್ನದೇ ಕರಡಿಗಳ ಕಾಟದಿಂದ ಹೈರಾಣಾದ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗಳ ಸಂರಕ್ಷಣೆಗಾಗಿ ಹರಸಾಹಸ ಪಡುವಂತಾಗಿದೆ.
ಕರಡಿಗಳನ್ನು ಕಂಡರೆ ಸಾಕು, ಗಲಾಟೆ ಮಾಡಿ ಓಡಿಸಬೇಕು ಎನಿಸುತ್ತದೆ. ಜೀವದ ಹಂಗು ತೊರೆದು ಕರಡಿಗಳನ್ನು ಓಡಿಸಿ, ಬೆಳೆಗಳ ಸಂರಕ್ಷಣೆ ಮಾಡಿಕೊಳ್ಳೋ ಪರಿಸ್ಥಿತಿ ಎದುರಾಗಿದೆ. ಕರಡಿಗಳೆಂದರೆ ಭಯ ಸ್ವಲ್ಪ ಯಾಮಾರಿದ್ರೂ ಕರಡಿಗಳು ರೈತರ ಮೇಲೆ ತಿರುಗಿ ಬೀಳುತ್ತವೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ, ಕರಡಿಹಳ್ಳಿ, ಕಡೆಕೋಳ, ಮಾಕನಡಕ, ಗುಂಡುಮುಣುಗು, ಕುರಿಹಟ್ಟಿ ಈ ಗ್ರಾಮಗಳಲ್ಲಿ ರೈತರಿಗೆ ಕರಡಿಗಳಿಂದ ಫಜೀತಿ ಉಂಟಾಗಿದೆ. ಕರಡಿ ಧಾಮ ಪಕ್ಕದಲ್ಲೇ ಇರುವುದರಿಂದ ಕರಡಿಗಳು ರೈತರ ಜಮೀನುಗಳಿಗೆ ಲಗ್ಗೆ ಇಡುತವೆ , ರೈತರು ಸಿಳ್ಳೆ, ಕೇಕೆ ಹಾಕಿ ಜೀವ ಭಯದಿಂದ ಕರಡಿಗಳನ್ನು ಓಡಿಸಬೇಕಾಗಿದೆ. ಇದನ್ನೂ ಓದಿ :-ಟಾಟಾ ಏಸಿಗೆ ದ್ವಿಚಕ್ರ ವಾಹನ ಡಿಕ್ಕಿ – ಸ್ಧಳದಲ್ಲೇ ಇಬ್ಬರು ಸಾವು