ಆಕ್ಸಿಜನ್ ಸಿಗದೇ ಬೆಳಗಾವಿಯಲ್ಲಿ ಮೂವರು ರೋಗಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಆಕ್ಸಿಜನ್ ಸಿಗದೇ ರಾಜ್ಯದಲ್ಲಿ ಒಟ್ಟಾರೆಯಾಗಿ ಮೃತಪಟ್ಟವರ ಸಂಖ್ಯೆ 31ಕ್ಕೇ ಏರಿಕೆಯಾಗಿದೆ.
ಚಾಮರಾಜನಗರದಲ್ಲಿ 34 ಮಂದಿ ಮತ್ತು ಕಲಬುರಗಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಬೆಳಗಾವಿಯಲ್ಲಿ ಆಂಬುಲೆನ್ಸ್ ನಲ್ಲಿ ಕರೆತಂದ ರೋಗಿಗಳಿಗೆ ಆಕ್ಸಿಜನ್ ಸಿಗದ ಕಾರಣ ಆಂಬುಲೆನ್ಸ್ ನಲ್ಲಿ ನರಳಿ ನರಳಿ ಮೃತಪಟ್ಟಿದ್ದಾರೆ. ಇದೇ ವೇಳೆ ಮತ್ತೊಂದು ಆಂಬುಲೆನ್ಸ್ ನಲ್ಲಿ ರೋಗಿಯನ್ನು ಕರೆ ತರಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ನಿಮ್ಮ ಮನೆಯಿಂದ ಆಕ್ಸಿಜನ್ ತಗೊಂಡು ಬಂದರೆ ನಾವು ಚಿಕಿತ್ಸೆ ಕೊಡುತ್ತೇವೆ. ಇಲ್ಲಿ ಆಕ್ಸಿಜನ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.