ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಮೇಲುಗೈ ಸಾಧಿಸಿದ ಬಿಜೆಪಿಯ ಮಂಗಳಾ ಅಂಗಡಿ ಗೆದ್ದು ನಿಟ್ಟುಸಿರುಬಿಟ್ಟಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ನಿರಾಸೆ ಅನುಭವಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಮೃತಪಟ್ಟಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ 4.25 ಲಕ್ಷಗಳನ್ನು ಪಡೆದು ಮೇಲುಗೈ ಸಾಧಿಸಿದರು.
ಭಾನುವಾರ ನಡೆದ ಮತ ಎಣಿಕೆ ವೇಳೆ ಆರಂಭದಿಂದಲೂ ಮಂಗಳವಾ ಅಂಗಡಿ ಮುನ್ನಡೆ ಸಾಧಿಸಿದ್ದರು. ಆದರೆ 50ನೇ ಸುತ್ತಿನ ನಂತರ ದಿಢೀರನೆ ಸತೀಶ್ ಜಾರಕಿಹೊಳಿ ಮುನ್ನಡೆ ಪಡೆದರು. 5 ಸುತ್ತುಗಳ ನಂತರ ಅಂತರ ಹೆಚ್ಚಿಸಿಕೊಂಡ ಸತೀಶ್ ಜಾರಕಿಹೊಳಿಗೆ ತಿರುಗೇಟು ನೀಡಿದ ಮಂಗಳ ಅಂಗಡಿ ಅಂತರ ಕಡಿಮೆ ಮಾಡಿಕೊಂಡರು. ಆದರೆ 60ನೇ ಸುತ್ತಿನ ನಂತರ ಮತ್ತೆ ಸತೀಶ್ ಜಾರಕಿಹೊಳಿ ಮೇಲುಗೈ ಸಾಧಿಸಿದ್ದರು. ಆದರೆ ಕೊನೆಯ 10 ಸುತ್ತುಗಳಲ್ಲಿ ಮೇಲುಗೈ ಸಾಧಿಸಿದ ಮಂಗಳವಾರ ಗೆಲುವಿನ ನಗೆ ಬೀರಿದರು.