ಬಟ್ಲರ್ ಚೊಚ್ಚಲ ಶತಕ: ಹೈದರಾಬಾದ್ ಗೆ 221 ರನ್ ಗುರಿ

ಆರಂಭಿಕ ಜೋಸ್ ಸಿಡಿಸಿದ ಚೊಚ್ಚಲ ಶತಕದ ನೆರವಿನಂದ ರಾಜಸ್ಥಾನ್ ರಾಯಲ್ಸ್ 221 ರನ್ ಗಳ ಕಠಿಣ ಗುರಿಯನ್ನು ಸನ್ ರೈಸರ್ಸ್ ಹೈದರಾಬಾದ್ ಗೆ ನೀಡಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 220 ರನ್ ಪೇರಿಸಿತು.

ಜೋಸ್ ಬಟ್ಲರ್ 64 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸೇರಿದ 124 ರನ್ ಬಾರಿಸಿ ಔಟಾದರು. ಬಟ್ಲರ್ 56 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಐಪಿಎಲ್ ನಲ್ಲಿ ಶತಕ ಸಿಡಿಸಿದ 4ನೇ ವಿದೇಶೀ ಆಟಗಾರ ಎನಿಸಿಕೊಂಡರು.

ನಾಯಕ ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 48 ರನ್ ಗಳಿಸಿದರು. ಇವರಿಬ್ಬರು 2ನೇ ವಿಕೆಟ್ ಗೆ 150 ರನ್ ಜೊತೆಯಾಟ ನಿಭಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!