ತಂದೆಯ ಕೊಲೆ ಮಾಡಿದ ವ್ಯಕ್ತಿಯನ್ನು ಕೊಂದು 10 ವರ್ಷದ ಸೇಡನ್ನು ಮಗ ತೀರಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.
ವೈಷಮ್ಯದಿಂದ ವ್ಯಕ್ತಿಯ ಕೊಲೆ ಮಾಡಿ ಮಗ ಸೇಡು ತೀರಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.
ರಾಯಭಾಗ ತಾಲೂಕಿನ ಕಂಕನವಾಡಿ ಗ್ರಾಮದ ಶೌಕತ್ ನದಾಫ್ (45) ನನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ 10 ವರ್ಷದ ಹಿಂದೆ ಕೊಲೆಯಾಗಿದ್ದ ಭೀಮಪ್ಪನ ವಿಠ್ಠಲ ಕಮತೆ (35) ಹಾಗೂ ಸುರೇಶ ಡಂಗೇರ್ (30) ಕೊಲೆಗೈದು ಪೊಲೀಸರಿಗೆ ಸಿಕ್ಕಿಬಿದ್ದಾರೆ.
10 ವರ್ಷದ ಹಿಂದೆ ಜೈಲಿನಲ್ಲಿದ್ದ ಬೆಂಡವಾಡ ಗ್ರಾಮದ ಭೀಮಪ್ಪ ಕಮತೆಯನ್ನು ಕೊಲೆ ಮಾಡಿರುವ ಆರೋಪವನ್ನು ಶೌಕತ್ ನದಾಫ್ ಎದುರಿಸುತ್ತಿದ್ದ. ಇದೇ ಸೇಡಿನಿಂದ ಶೌಕತ್ ನದಾಫ್‍ನ ಮೇಲೆ ಸೇಡು ಹೊಂದಿದ್ದ ಭೀಮಪ್ಪನ ಮಗ ಹಾಗೂ ಸಹಚರರು ಕಳೆದ ಎರಡು ದಿನಗಳ ಹಿಂದೆ ಶೌಕತ್ ನದಾಫ್ ಕೊಲೆ ಮಾಡಿ ಶವ ಬಿಸಾಡಿ ಹೋಗಿದ್ದರು.
ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಭೀಮಪ್ಪ ಹಿಂಡಲಗಾ ಜೈಲಿನಲ್ಲಿದ್ದರು. ಇತ್ತ ಮೊತ್ತೊಂದು ಪ್ರಕರಣದಲ್ಲಿ ಅದೇ ಹಿಂಡಲಗಾ ಜೈಲಿನಲ್ಲಿ ಶೌಕತ್ ನದಾಫ್ ಇದ್ದ. ಭೀಮಪ್ಪನನ್ನು ಜೈಲಿನಲ್ಲಿಯೇ ಶೌಕತ್ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಇತ್ತ ತಂದೆಯನ್ನು ಕೊಲೆ ಮಾಡಿರುವ ಸೇಡು ತೀರಿಸಿಕೊಳ್ಳುವಲ್ಲಿ ಭೀಮಪ್ಪನ ಮಗ ವಿಠಲ ಪ್ರಯತ್ನಿಸುತ್ತಿದ್ದ. ಅಂತೆಯೇ ಶೌಕತ್ ನನ್ನು ವಿಠಲ ಬರ್ಬರವಾಗಿ ಕೊಂದು ಹಾಕಿದ್ದಾನೆ. ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.