ಜೆಡಿಎಸ್ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರ್ತಿವಿ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯ ನಾವು ನೂರಕ್ಕೆ ನೂರು ಅಧಿಕಾರಕ್ಕೆ ಬರ್ತೀವಿ. ಅದು ಕ್ಲಿಯರ್ ಮೆಜಾರಿಟಿಯಲ್ಲಿ ಬರ್ತೀವಿ. ಭಾವನತ್ಮಕ ವಿಚಾರ ಇಟ್ಕೊಂಡು ಕರ್ನಾಟಕ ಗೆಲ್ಲೋಕಾಗೊಲ್ಲ. ಉತ್ತರ ಪ್ರದೇಶನೇ ಬೇರೆ ಕರ್ನಾಟವೇ ಬೇರೆ. ಬಿಜೆಪಿ ಅವರಿಗೆ ಯಾವತ್ತು ಬಹುಮತ ಸಿಕ್ಕಿಲ್ಲ. ಬರೀ ಆಪರೇಶನ್ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಪಕ್ಷದಲ್ಲಿ ಬಣ ರಾಜಕೀಯವಿಲ್ಲ. ಬಿಜೆಪಿಯಲ್ಲೇ ಹತ್ತಾರು ಬಣಗಳಿವೆ. ಕಾಂಗ್ರೆಸ್ ನಿಂದ ಹೋದವರನ್ನ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳೊದಿಲ್ಲ. ಪಕ್ಷದ ಸಿದ್ಧಾಂತಕ್ಕೆ ಹಾನಿ ಮಾಡಿದವರಿಗೆ ಮತ್ತೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಶಾಲಾ ಪಠ್ಯದಲ್ಲಿ ಭಗವದ್ಗೀತೆ ವಿಚಾರವಾಗಿ ಮಾತನಾಡಿದ ಅವರು ನೈತಿಕ ಶಿಕ್ಷಣ ಮುಖ್ಯ ಅದರ ಜೊತೆಗೆ ಗುಣಮಟ್ಟದ ಶಿಕ್ಷಣ ಕೂಡ ನೀಡಬೇಕು. ಸಂವಿಧಾನ ವಿರೋಧಿಯಾಗಿ ಏನನ್ನು ಮಾಡಬಾರದು ಎಂದು ತಿಳಿಸಿದ್ರು.
0 67 Less than a minute