ವರದಿ : ಧನು ಯಲಿಗಚ್
ಬೆಂಗಳೂರು : ಯಂಗ್ ಎನರ್ಜಿಟಿಕ್ ಹೀರೋ ಡಾ.ಶಿವರಾಜ್‍ಕುಮಾರ್ ಅಭಿನಯದ ಮೋಸ್ಟ್ ಎಕ್ಸ್‍ಪೆಕ್ಟೆಡ್ ಸಿನಿಮಾ ಭಜರಂಗಿ ಪಾರ್ಟ್-2 ಸಿನಿಮಾ ಇನ್ನೇನು ರಿಲೀಸ್‍ಗೆ ರೆಡಿಯಾಗಿದೆ.ಈ ಸಿನಿಮಾ ಈಗಾಗ್ಲೇ ಟೀಸರ್ ಹಾಗೂ ಲಿರಿಕಲ್ ಸಾಂಗ್ ಮೂಲಕ ಸದ್ದು ಮಾಡ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷಾ ಕಾಂಬಿನೇಷನ್‍ನ ಮೂರನೇ ಸಿನಿಮಾ ಭಜರಂಗಿ-2.
ವಜ್ರಕಾಯ, ಭಜರಂಗಿ ಎರಡು ಸಿನಿಮಾಗಳು ಸ್ಯಾಂಡಲ್‍ವುಡ್‍ನಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ, ಅದೇ ಹಾದಿಯಲ್ಲಿ ಭಜರಂಗಿ-2 ಸಿನಿಮಾ ಕೂಡಾ. ಇಂದು ಈ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಆಗಿದೆ.
ಹೌದು, ಭಜರಂಗಿ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಆಗಿದ್ದು, ಈ ಸಾಂಗ್‍ಗೆ ಕೆ.ಕಲ್ಯಾಣ್ ಸಾಹಿತ್ಯ ರಚಿಸಿದ್ರೆ, ಸಿದ್ ಶ್ರೀರಾಮ್ ಕಂಠದಾನ ಮಾಡಿದ್ದಾರೆ. ಇನ್ನು ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಸಾಂಗ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡ್ತಿದೆ.
ಥಿಯೇಟರ್‍ಗೆ ಬರೋದಕ್ಕೆ ಹವಣಿಸುತ್ತಿರೋ ಭಜರಂಗಿ-2 ಸಿನಿಮಾದ ಸಾಂಗ್ ಶಿವಣ್ಣನ ಅಭಿಮಾನಿಗಳಿಗೆ ಯುಗಾದಿಯ ವಿಶೇಷವಾಗಿ ಮುಂಗಡವಾಗಿಯೇ ಗಿಫ್ಟ್ ನೀಡಿದೆ ಚಿತ್ರತಂಡ.