ಮಾಲೂರು ಪುರಸಭೆ ನೂತನ ಅಧ್ಯಕ್ಷರಾಗಿ ಭವ್ಯ ಶಂಕರ್ ಆಯ್ಕೆ

ಕೋಲಾರ ಮಾಲೂರು ಪುರಸಭೆಯ ನೂತನ ಅಧ್ಯಕ್ಷೆಯಾಗಿ ಭವ್ಯ ಶಂಕರ್ ( BHAVYA SHANKAR ) ಆಯ್ಕೆಯಾಗಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಮಾಲೂರು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.

27 ಸದಸ್ಯರನ್ನು ಒಳಗೊಂಡಿರುವ ಮಾಲೂರು ಪುರಸಭೆ ಚುನಾವಣೆಯಲ್ಲಿ . ಓಟ್ಟು 15 ಸದಸ್ಯರು ಭವ್ಯ ಶಂಕರ್ ಗೆ ಮತ ಚಲಾಯಿಸಿದ್ದಾರೆ. ಬಿಜೆಪಿಯ ನಾಮ ನಿರ್ದೇಶನ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಪಡೆದಿದ್ದ ಹಿನ್ನೆಲೆಯಲ್ಲಿ ಹಿಂಬಾಗಿಲಿನಿಂದ ಪುರಸಭೆ ಆಧ್ಯಕ್ಷ ಸ್ಥಾನ ಬಿಜೆಪಿ ಪಡೆದಿತ್ತು . ಇದನ್ನೂ ಓದಿ : –  ರಾಯಚೂರಿನಲ್ಲಿ ಇಂದಿನಿಂದ ಜೂನ್ 1 ರವರೆಗೂ ಕಲಿಕಾ ಚೇತರಿಕೆ ಕಾರ್ಯಕ್ರಮ

ಕಳೆದ ಡಿಸೆಂಬರ್ ನಿಂದ ಈ ವರೆಗೆ ಬಿಜೆಪಿಯ ಅನಿತಾ ನಾಗರಾಜ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಾಮನಿ ಸದಸ್ಯರ ಮತ ಚಲಾಯಿಸುವ ವಿರುದ್ಧ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅಧ್ಯಕ್ಷ ಸ್ಥಾನವನ್ನ ಭವ್ಯ ಶಂಕರ್ ಅಲಂಕರಿಸಿದ್ದಾರೆ. ಕಾಂಗ್ರೆಸ್ ವತಿಯಿಂದ ಪುರಸಭೆಯ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ರು. ಇದನ್ನೂ ಓದಿ : – 14 ವರ್ಷದ ನಂತರ ವಿಶೇಷ ದಾಖಲೆ ಬರೆದ KRS ಡ್ಯಾಂ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!