ಪಿಎಸ್ಐ ನೇಮಕಾತಿ ಅಕ್ರಮ ವಿಚಾರ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಈ ಪ್ರಕರಣ ಕಲಬುರ್ಗಿಗೆ ಸೀಮಿತವಾಗಿಲ್ಲ. ಬೆಂಗಳೂರಿಗೂ ಈ ಪ್ರಕರಣಕ್ಕೂ ಸಂಬಂಧವಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಕರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿಕೆ ಹೊಸ ಬಾಂಬ್ ಸಿಡಿಸಿದ್ದಾರೆ. ನ್ಯಾಯಯುತವಾಗಿ ಪಾಸ್ ಆದವರು ಅಳಲು ತೋಡಿಕೊಳ್ತಿದ್ದಾರೆ. ಇದನ್ನು ಓದಿ:- ಇವತ್ತಿಂದಲೇ ಡಿಕೆಶಿಯ ಕೊಳಕಿನ ಜಾಲ ಬಿಡಿಸ್ತೀನಿ – ಅಶ್ವಥ್ ನಾರಾಯಣ್ ಸವಾಲು
ಏಕಾ ಏಕಿ ಪರೀಕ್ಷೆ ರದ್ದು ಮಾಡಬಾರದಿತ್ತು. ಪ್ರಕರಣದ ತನಿಖೆ ನಡೆಸಿದ್ದರೆ ಸೂಕ್ತವಾಗಿತ್ತು ಎಂದು ಹೇಳಿದ್ದಾರೆ. ಅನೇಕ ಮಾಹಿತಿಗಳು ಕೂಡ ನನಗೆ ಬರ್ತಾ ಇವೆ. ಪೂರ್ಣ ವರದಿ ನಂತರ ಪರೀಕ್ಷೆ ರದ್ದು ಮಾಡಬೇಕಿತ್ತು ಎಂದು ತಿಳಿಸಿದ್ದಾರೆ.
ಇದನ್ನು ಓದಿ :-ನನ್ನ ಬಂಧನಕ್ಕೆ ಪ್ರಧಾನಿ ಕಚೇರಿಯಿಂದಲೇ ಷಡ್ಯಂತ್ರ – ಜಿಗ್ನೇಶ್ ಮೇವಾನಿ