ದೇಶದಲ್ಲಿ ಒಂದೇ ದಿನದಲ್ಲಿ 2.61 ಲಕ್ಷ ಪ್ರಕರಣಗಳು ಪತ್ತೆಯಾಗಿದ್ದು, ಮತ್ತೊಂದು ಸಾರ್ವಕಾಲಿಕ ದಾಖಲೆಯ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ, ದೆಹಲಿ ಪಾತ್ರ ಅತ್ಯಧಿಕವಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಸತತ 4ನೇ ದಿನ 2 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಒಟ್ಟಾರೆ ಸೋಂಕಿತರ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 1501 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಮೃತರ ಸಂಖ್ಯೆ 1,77,150ಕ್ಕೆ ಜಿಗಿತ ಕಂಡಿದೆ. ಒಟ್ಟಾರೆ ಗುಣಮುಖಿತರ ಸಂಖ್ಯೆ 1,28,09,643ಕ್ಕೆ ಜಿಗಿತ ಕಂಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,01,316ಕ್ಕೆ ತಲುಪಿದೆ. ದೇಶದಲ್ಲಿ ಇದುವರೆಗೆ 12,26,22,590 ಮಂದಿಗೆ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಅತ್ಯಧಿಕ ಸೋಂಕು ಪತ್ತೆಯಾಗುವುದರ ಹಿಂದೆ 5 ರಾಜ್ಯಗಳ ಕೊಡುಗೆ ಹೆಚ್ಚಾಗಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಚತ್ತೀಸ್ ಗಢ ಮತ್ತು ಉತ್ತರ ಪ್ರದೇಶ ಕೊಡುಗೆ ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ 67,1233, ಉತ್ತರ ಪ್ರದೇಶದಲ್ಲಿ 27,334, ದೆಹಲಿಯಲ್ಲಿ 24,375, ಕರ್ನಾಟಕದಲ್ಲಿ 17,489, ಚತ್ತೀಸ್ ಗಢದಲ್ಲಿ 16,083 ಸೋಂಕು ಪ್ರಕರಣಗಳು ವರದಿಯಾಗಿವೆ.