ಸಾಫ್ಟ್ ವೇರ್ ಉದ್ಯಮದ ದೈತ್ಯ ಬಿಲ್ ಗೇಟ್ಸ್ ಅವರ ಸುಮಾರು 27 ವರ್ಷಗಳ ಸುದೀರ್ಘ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು ವಿಚ್ಛೇದನ ಮೆಟ್ಟಿಲೇರಿದೆ.
65 ವರ್ಷದ ಬಿಲ್ ಗೇಟ್ಸ್ ಮತ್ತು 56 ವರ್ಷದ ಮೆಲಿಂಡಾ ಗೇಟ್ಸ್ 27 ವರ್ಷದ ದಾಂಪತ್ಯವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ ಇದಾಗಲಿದೆ ಎನ್ನಲಾಗಿದೆ.
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಹಲವಾರು ವರ್ಷಗಳಿಂದ ಹೆಮ್ಮೆಗೆ ಪಾತ್ರರಾಗಿರುವ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಇದೀಗ 146 ಶತಕೋಟಿ ಡಾಲರ್ ಮೊತ್ತದ ಆಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.
ಬಿಲ್ ಗೇಟ್ಸ್ ಮತ್ತು ಮೆಲಿಂಡಾ ನೇತೃತ್ವದಲ್ಲಿ 2000 ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲಾಗಿದ್ದು, ಇದು ವಿಶ್ವದ ಅತ್ಯಂತ ಶ್ರೀಮಂತ ಟ್ರಸ್ಟ್ ಕೂಡ ಆಗಿತ್ತು. ಈ ಸಂಸ್ಥೆ ಮೂಲಕ ಜಗತ್ತಿನಾದ್ಯಂತ ಹಲವು ಕ್ಷೇತ್ರಗಳಿಗೆ ದೊಡ್ಡ ಮೊತ್ತದ ನೆರವು ನೀಡಲಾಗುತ್ತಿತ್ತು.