ಬಿಜೆಪಿಯಲ್ಲಿ ವಂಶಪಾರಂಪರ್ಯ ಆಡಳಿತವಿಲ್ಲ: ಸಿ ಟಿ ರವಿ

ಬೆಂಗಳೂರು: ಕರ್ನಾಟಕದಲ್ಲಿ ವಂಶಪಾರಂಪರ್ಯ ಆಡಳಿತ ಇಲ್ಲ. ನಮ್ಮ‌ ಪಕ್ಷದ ಡಿಎನ್ ಎ ನಲ್ಲಿಯೂ ಅದು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಉತ್ತರಾಧಿಕಾರಿಗಳ ಸಂಸ್ಕೃತಿ ಪಕ್ಷವಲ್ಲಿ, ನಮ್ಮ ಪಕ್ಷಕ್ಕೆ ಯಾರೋ ಒಬ್ಬ ವ್ಯಕ್ತಿ ಮಾಲೀಕ ಅಲ್ಲ ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಮಾಲೀಕರು, ಕಾಂಗ್ರೆಸ್ ಪಕ್ಷಕ್ಕೆ ನೆಹರು ಕುಟುಂಬ, ಡಿಎಂಕೆಗೆ ಕರುಣಾನಿಧಿ, ಸಮಾಜವಾದಿ ಪಕ್ಷಕ್ಕೆ ಮುಲಾಯಂ ಸಿಂಗ್​ ಯಾದವ್ ಹೀಗೆ ಎಲ್ಲ ಪಕ್ಷಕ್ಕೂ ಕುಟುಂಬ ಮಾಲೀಕತ್ವ ಇದೆ ಆದರೆ ನಮ್ಮಲ್ಲಿ ಅಂತಹ ಪ್ರವೃತ್ತಿ ಇಲ್ಲ, ಕಾರ್ಯಕರ್ತರೇ ಮಾಲೀಕರು ಎಂದು ತಿಳಿಸಿದರು.

ಯಡಿಯೂರಪ್ಪ ನಮ್ಮ‌ ಸರ್ವೋಚ್ಚ ನಾಯಕರೇ ಹೊರತು ಮಾಲೀಕರಲ್ಲ, ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕ, ಅಮಿತ್ ಶಾ ನಾಯಕ, ಯಡಿಯೂರಪ್ಪ ನಾಯಕ. ಆದರೆ ಕಾರ್ಯಕರ್ತರೇ ಮಾಲೀಕರು. ಇತರ ಪಕ್ಷದಲ್ಲಿ ಅಂತಿಮ ನಿರ್ಧಾರ ಯಾವುದೋ ಒಬ್ಬ ನಾಯಕನ ಕುಟುಂಬ ತೆಗೆದುಕೊಳ್ಳಲಿದೆ. ಆದರೆ ನಮ್ಮ ಪಕ್ಷದಲ್ಲಿ ಕೋರ್ ‌ಕಮಿಟಿ, ಸಂಸದೀಯ ಮಂಡಳಿ ತೆಗೆದುಕೊಳ್ಳಲಿದೆ ಎಂದರು.

ನಮ್ಮ ಪಕ್ಷ ಎಲ್ಲರಿಗೂ ಯೋಗ್ಯತೆ ಪರಿಶ್ರಮದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅವಕಾಶ ಕೊಡಲಿದೆ ಆದರೆ ಉತ್ತರಾಧಿಕಾರಿ ಸಂಸ್ಕೃತಿಗೆ ಅವಕಾಶ ಇಲ್ಲ, ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ,‌ ನಮ್ಮದು ಕೇಡರ್ ಬೇಸ್ಡ್ ಡಿಎನ್​​ಎ ಎಂದು ತಿಳಿಸಿದರು.

ಸಿಎಂ ಬಿಎಸ್​ವೈ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಅವರು ದೂರು ನೀಡಿರುವ ವಿಷಯವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ಈಶ್ವರಪ್ಪ ದೂರಿನ‌ ಬಗ್ಗೆ ನಾನು ಇಲ್ಲಿ ಚರ್ಚೆ ಮಾಡಲ್ಲ. ಪಕ್ಷದ ವೇದಿಕೆಯಲ್ಲೇ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈಶ್ವರಪ್ಪ ನನಗೆ ಇದುವರೆಗೂ ಪತ್ರ ಬರೆದಿರೋದು ಗೊತ್ತಿಲ್ಲ. ಆದರೆ ಫೋನ್ ಮಾಡಿದ್ದರು. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡೋದಾಗಿ ಹೇಳಿದ್ದೇನೆ. ನಾನು ರಾಜ್ಯ ರಾಜಕಾರಣ ಬಿಟ್ಟು, ಪಕ್ಷದ ಸಂಘಟನೆ ಕಡೆ ಗಮನ ಕೊಟ್ಟಿದ್ದೇನೆ. ನಾನು ಇದರ ಬಗ್ಗೆ ಎಲ್ಲಿ ಚರ್ಚೆ ಮಾಡಬೇಕೋ ಅಲ್ಲೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!