ಬಿಜೆಪಿಯವರೇ ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ ಅದನ್ನ ನೋಡಿಕೊಳ್ಳಿ – ಪ್ರಿಯಾಂಕ್ ಖರ್ಗೆ

ಸಿಐಡಿ ತನಿಖೆ ಸರಿಯಾದ ದಿಕ್ಕಿನಲ್ಲಿ ಹೋಗ್ತಿಲ್ಲ. ಬೆಂಗಳೂರಿನಲ್ಲಿ ತನಿಖೆ ಆದಾಗ , ದಾಳಿ ಮಾಡಿದಾಗ 22 ಜನ ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲಿ ೧೦ ಜನ ಓಡಿಹೋಗಿದ್ದಾರೆ ೧೦ ಜನ ಸಿಕ್ಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು ಪ್ರಕರಣದಲ್ಲಿರುವ ಹೆಸರುಗಳನ್ನು ಹೇಳ್ತೇನೆ, ಅದನ್ನ ತನಿಖೆ ಮಾಡೋ ಧೈರ್ಯ ಇದೆಯಾ ಅಂತಾ ಕಿಂಗ್ ಪಿನ್ ಆರ್. ಡಿ ಪಾಟೀಲ್ ಹೇಳಿದ್ದಾನೆ. ಅಧಿಕಾರಿಗಳಿಗೆ ಎಷ್ಟು ನೋಟಿಸ್ ಕೊಟ್ಟಿದ್ದೀರಾ. ನಿಮ್ಮ ಶಾಸಕರಿಗೆ ಎಷ್ಟು, ಮಂತ್ರಿಗಳಿಗೆ ಎಷ್ಟು ನೋಟಿಸ್ ಕೊಟ್ಟಿದ್ದಿರೀ. ನನಗೆ ಮೂರು ಮೂರು ನೋಟಿಸ್ ಕೊಟ್ಟಿದ್ದಿರೀ. ಈ ತನಿಖೆ ಇಲ್ಲಿಗೆ ಮುಚ್ಚಿಹಾಕುವ ಕೆಲಸ ಮಾಡಬಾರದು.

ಆರ್.ಡಿ.ಪಾಟೀಲ್ – Public TV

ಆರ್ ಡಿ ಪಾಟೀಲ್ ಹೇಳುವ ಹೆಸರಗಳನ್ನ ಕೇಳಿ ತನಿಖೆ ಮಾಡಬೇಕು. ಅಕ್ರಮವೇ ನಡೆದಿದ್ದಾ ಎಂದು ಹೇಳಿದ್ದ ಸರ್ಕಾರ ಈಗ ಏನ್ ಹೇಳುತ್ತಾರೆ. ನಾನು ಹಿಟ್ ಆಂಡ್ ರನ್ ಅಲ್ಲ, ಅವರು ಹಿಟ್ ಆಂಡ್ ರನ್ ಮಾಡ್ತಿದ್ದಾರೆ. ಮನಿ ಟ್ರಾಯಲ್ ಫಾಲೋ ಮಾಡಬೇಕು. ಡೀಲ್ ಹಣ ಎಲ್ಲಿ ಎಷ್ಟೇಷ್ಟು ಹೋಗಿದೆ ಅದನ್ನ ಹೊರಗಡೆ ತರಬೇಕು. ಈ ಅಕ್ರಮ ಬಗ್ಗೆ ಇಲಾಖೆ ಯಲ್ಲಿದ್ದವರಿಗೆ ಮಾಹಿತಿ ಇಲ್ಲವಾ ?… ಪೇಪರ್ 1 ತನಿಖೆ ಸರಿಯಾಗಿ ಮಾಡಿದ್ರೆ 100 ಜನ ಸಿಕ್ಕಿಹಾಕಿಕೊಳ್ಳುತ್ತಾರೆ. ಪರೀಕ್ಷೆ ಕೇಂದ್ರ ,ಬ್ಲೂಟೂತ್ ಅಷ್ಟೇ ತನಿಖೆ ಮಾಡ್ತಿದ್ದಾರೆ. ಲಿಮಿಟೆಡ್ ನಲ್ಲಿ ತನಿಖೆ ಮಾಡಿದ್ತಿದ್ದಾರೆ. ಪರೀಕ್ಷೆ ಅಕ್ರಮದ ನಿರ್ದೇಶಕರು, ನಿರ್ಮಾಪಕರು ಸರ್ಕಾರದಲ್ಲಿದ್ದಾರೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಬೇಲ್ ಮೇಲೆ ಹೊರಗಿರೋ ಹುಡುಗ ನನ್ನ ಪ್ರಾಮಾಣಿಕತೆ ಪ್ರಶ್ನಿಸ್ತಾನೆ – ನಲಪಾಡ್ ವಿರುದ್ಧ ರಮ್ಯಾ ಟ್ವೀಟ್ ಸಮರ
ಆಜಾನ್ ಸಂಘರ್ಷ ವಿಚಾರವಾಗಿ ಮಾತನಾಡಿದ ಅವರು
ದೇಶ ವಿಭಜನೆ ಆಗೋದಕ್ಕೆ ಕಾರಣ ಬಿಜೆಪಿ. ಸಮಾಜದಲ್ಲಿ ಧರ್ಮದ ವಿಷ ಬೀಜ ಬಿತ್ತುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಯಾಕೆ ಸರ್ಕಾರ ಅನುಷ್ಠಾನ ಮಾಡುತ್ತಿಲ್ಲ. ಎಲ್ಲಾ ಮಸೀದಿ, ಮಂದಿರಗಳಿಗೆ ನೋಟಿಸ್ ಕಳಿಸಿ, ಯಾಕೆ ಕಳಿಸ್ತಿಲ್ಲ. ಆಜಾನ್ ಸಂಘರ್ಷ ಇದು ರಾಜಕೀಯಕ್ಕಾಗಿ ಬಿಜೆಪಿ ಮಾಡ್ತಿದೆ.

Bjp News: Latest News and Updates on Bjp at News18

ಬಿಜೆಪಿ ಅವರು ಯಾಕೆ ಪ್ರೆಟ್ರೋಲ್, ಡಿಸೇಲ್, ನಿರುದ್ಯೋಗ ಬಗ್ಗೆ ಮಾತಾಡುತ್ತಿಲ್ಲ. ಚುನಾವಣೆ ಉದ್ದೇಶದಿಂದ ಈ ರೀತಿ ಬಿಜೆಪಿ ಮಾಡ್ತಿದೆ. ಆರ್ ಎಸ್ ಎಸ್ ಅಜಂಡಾ ಫುಲ್ ಫಿಲ್ ಮಾಡೋಕೆ ಇವರು ಮಾಡ್ತಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದ್ರು. ಇದನ್ನೂ ಓದಿ : – ಕಬಿನಿಯಲ್ಲಿ 5 ಹುಲಿಗಳ ದರ್ಶನ – ಪುಳಕಿತರಾದ ಪ್ರಾಣಿ ಪ್ರಿಯರು
ರಮ್ಯಾ ವರ್ಸಸ್ ಡಿಕೆಶಿ ವಿಚಾರ
ಎಲ್ಲರ ಮನೆ ದೋಸೆ ತೂತೆ ಇರುತ್ತೆ. ರಮ್ಯಾ ಅವರದ್ದು ಪಕ್ಷಕ್ಕೆ ತಮ್ಮದೆ ಆದ ಕೊಡುಗೆ ಇದೆ. ಸಂಸದರಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ಅವರೇ ನಿಮ್ಮ ತಟ್ಟೆಯಲ್ಲೆ ಹೆಗ್ಗಣ ಬಿದ್ದಿದೆ ಅದನ್ನ ನೋಡಿಕೊಳ್ಳಿ. ಬಿಜೆಪಿ ಅವರು ನಮ್ಮ ಬಗ್ಗೆ ಚಿಂತೆ ಮಾಡೋದನ್ನ ಕಡಿಮೆ ಮಾಡಲಿ ಎಂದು ಹೇಳಿದ್ರು.

Controversy queen? The many times that Ramya stirred up a storm

ಯತ್ನಾಳ್ ವಿರುದ್ದ ಕಟೀಲ್ ಏನು ಕ್ರಮ ತೆಗೆದುಕೊಂಡಿದ್ದಾರೆ
ಬಿಜೆಪಿಯಲ್ಲಿ ಸಿಡಿ ಕೊಟ್ಟರೆ ಮಂತ್ರಿ ಆಗ್ತಾರೆ. ಸಂಪುಟ ರಚನೆ ಸಮೀಪ ಬಂದಿದೆ ಮತ್ತೆ ಸಿಡಿ ರೆಡಿ ಆಗುತ್ತವೆ. ಇದು ನನ್ನ ಹೇಳಿಕೆಯಲ್ಲ ಬಿಜೆಪಿಯ ನಾಯಕರೆ ಹೇಳ್ತಾರೆ.

I will be next Karnataka CM, claims Yatnal- The New Indian Express

ಯಾರ್ಯಾರ ಸಿಡಿ ಏನೇನು ರೆಡಿ ಆಗ್ತಿದೆ ಅಂತಾ ಅವರಿಗೆ ಗೊತ್ತು. ಇದು ನನ್ನ ಹೇಳಿಕೆ ಅಂತಾ ಹಾಕಬೇಡಿ. ಅವರ ಪಕ್ಷದವರೆ ಹೇಳಿರೋದನ್ನ ನಾನು ಹೇಳ್ತಿದ್ದಿನಿ. ಇಲ್ಲ ಅಂದ್ರೆ ಇದಕ್ಕೆ ಮತ್ತೆ ನನಗೆ ನೋಟಿಸ್ ಕೊಡ್ತಾರೆ. ಯಾರ್ಯಾರ ಸಿಡಿ ಇದೆ ತಂದು ಕೊಡಿ ಅಂತಾ ಕೇಳ್ತಾರೆ ಎಂದು ಬಿಜೆಪಿ ವಿರುದ್ದ ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ : –  ಕ್ಷಣಾರ್ಧದಲ್ಲಿಯೇ ಪ್ರಾಣಾಪಾಯದಿಂದ ಪಾರಾದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!