ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಇತ್ತೀಚೆಗಷ್ಟೇ ಅವರ ಗೆಳೆಯ ರಣಬೀರ್ ಕಪೂರ್ ಸೋಂಕಿಗೆ ತುತ್ತಾಗಿದ್ದರು. ಇದೇ ಹಿನ್ನಲೆ ಅವರು ಗೆಳೆಯನಿಲ್ಲದೇ ಹುಟ್ಟುಹಬ್ಬ ಆಚರಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಆಲಿಯಾ ಭಟ್, ಎಲ್ಲರಿಗೂ ನಮಸ್ಕಾರ, ನನಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಕೂಡಲೇ ನಾನು ಪ್ರತ್ಯೇಕ ವಾಸಕ್ಕೆ ಒಳಗಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ನನ್ನ ವೈದ್ಯರ ಸಲಹೆಯಂತೆ ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ.
ಈ ಹಿಂದೆ ಅಮಿರ್ ಖಾನ್, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಸೋಂಕಿಗೆ ತುತ್ತಾಗಿದ್ದಾರೆ.ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನಸ ಮುಂಬೈ ಮಾಫಿಯಾ ಕ್ವೀನ್ ಗಂಗೂಬಾಯಿ ಕಾಥಿಯಾವಾಡ ಜೀವನಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ.