ವಿವಾದಾತ್ಮಕ ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೆಲವು ದಿನಗಳಿಂದ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಹೋಂ ಕ್ವಾರಂಟೈನ್ ಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಶನಿವಾರ ಯೋಗ ಭಂಗಿಯಲ್ಲಿರುವ ತನ್ನ ಚಿತ್ರ ಹಂಚಿಕೊಂಡಿರುವ ಕಂಗನಾ, 1ಕಳೆದ ಕೆಲವು ದಿನಗಳಿಂದ ನನ್ನ ಕಣ್ಣುಗಳಲ್ಲಿ ಸ್ವಲ್ಪ ಉರಿಯುವ ಸಂವೇದನೆಯೊಂದಿಗೆ ನಾನು ದಣಿದಿದ್ದೇನೆ ಮತ್ತು ದುರ್ಬಲಳಾಗಿದ್ದೇನೆ, ಹಿಮಾಚಲಕ್ಕೆ ಹೋಗುವ ನಿರೀಕ್ಷೆಯಲ್ಲಿದ್ದೆ ಆದ್ದರಿಂದ ನಿನ್ನೆ ನನ್ನ ಪರೀಕ್ಷೆ ಮಾಡಲಾಗಿದೆ ಮತ್ತು ಇಂದು ಫಲಿತಾಂಶ ಬಂದಿದೆ ನಾನು ಕೋವಿಡ್ ಪಾಸಿಟಿವ್ ಆಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
`ನಾನು ನನ್ನನ್ನು ಕ್ವಾರಂಟೈನ್ ಮಾಡಿದ್ದೇನೆ. ಈ ವೈರಸ್ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಈಗ ನಾನು ಅದನ್ನು ಕೆಡವುತ್ತೇನೆ ಎಂದು ನನಗೆ ತಿಳಿದಿದೆ, ನೀವು ಹೆದರಲು ಹೋಗಬೇಡಿ. ಹೆದರಿದರೆ ಕೊರೋನಾ ನಿಮ್ಮನ್ನು ಹೆಚ್ಚು ಹೆದರಿಸುತ್ತದೆ. ಬನ್ನಿ ಈ ಕೋವಿಡ್ ಅನ್ನು ನಾಶಪಡಿಸೋಣ ಇದು ಸಣ್ಣ ಸಮಯದ ಫ್ಲೂ ಆಗಿದೆ, ಇದನ್ನು ನಾಶಮಾಡೋಣ ಹರ್ ಹರ್ ಮಹಾದೇವ್ ಎಂದು ಬರೆದುಕೊಂಡಿದ್ದಾರೆ.