ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧದ ಲಂಚ ಆರೋಪ- ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಮಸಿ ದಾಳಿ..!

ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್ (Rakesh singh tikayat) ಮುಖಕ್ಕೆ ಮಸಿ ಬಳಿದು ಹಲ್ಲೆಗೆ ಯತ್ನಿಸಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್(Kodihalli chandrashekar) ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿಭವನದಲ್ಲಿ ಸಭೆ ಕರೆಯಲಾಗಿತ್ತು.

ರಾಷ್ಟ್ರೀಯ ಕಿಸಾನ್ ಮೋರ್ಚಾ(Bharatiya kisan morcha) ಅಧ್ಯಕ್ಷ ಟಿಕಾಯತ್, ಯುದ್ಧವೀರ ಸಿಂಗ್ (Yudhaveer Singh) , ಪ್ರೊಫೆಸರ್ ರವಿವರ್ಮ ಕುಮಾರ್(Prof. Ravivarma kumar) ಚುಕ್ಕಿ ನಂಜುಂಡಸ್ವಾಮಿ (Chukki Nanjundaswami)ವೇದಿಕೆ ಮೇಲಿದ್ದರು. ಈ ವೇಳೆ ಏಕಾ ಏಕಿ ನುಗ್ಗಿ ವ್ಯಕ್ತಿಯೋರ್ವ ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾನೆ. ಏಕಾಏಕಿ ವೇದಿಕೆಗೆ ನುಗ್ಗಿದ ಯುವಕ ಟಿವಿ ಚಾನಲ್ ಮೈಕ್ ಕಿತ್ತುಕೊಂಡು ರಾಕೇಶ್ ಸಿಂಗ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಎರಚಿದ್ದಾನೆ. ಈ ಸಂದರ್ಭದಲ್ಲಿ ಮಾರಾಮಾರಿ ನಡೆದಿದೆ. ಅಲ್ಲಿ ಸೇರಿದ್ದವರು ಯವಕನನ್ನ ಹಿಡಿದು ಥಳಿಸಿದ್ದಾರೆ.ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಮಸಿ ದಾಳಿ ನಡೆದ 2 ದಿನಗಳ ಬಳಿಕ ಇದೀಗ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ದಾಳಿ ನಡೆದಿದೆ. ಇದನ್ನೂ ಓದಿ : – ವೇದಿಕೆಯಲ್ಲಿ ಹಾಡುವಾಗಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ಕೇರಳದ ಗಾಯಕ..!

ಈ ದಾಳಿಯನ್ನು ಯಾರು ಮಾಡಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಮಸಿ ಬಳಿದ ಬಳಿಕ ‘ಮೋದಿ.. ಮೋದಿ..’ ಎಂಬ ಘೋಷಣೆಯನ್ನು ದುಷ್ಕರ್ಮಿಗಳು ಕೂಗಿದ್ದಾರೆ.

ಕೃಷಿ ಕಾಯ್ದೆ ವಿರುದ್ಧದ ಹೋರಾಟದಿಂದಲೇ ದೇಶದ ಗಮನ ಸೆಳೆದ ರಾಕೇಶ್ ಟಿಕಾಯತ್, ಇದೀಗ ಮಸಿ ದಾಳಿಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸ್ಥಳದಲ್ಲಿ ಪೊಲೀಸ್ ಭದ್ರತೆಯೇ ಇರಲಿಲ್ಲ ಎಂದಿದ್ದಾರೆ. ಸ್ಥಳೀಯ ಪೊಲೀಸರು ನಮಗೆ ರಕ್ಷಣೆ ನೀಡಲಿಲ್ಲ. ಈ ದಾಳಿಯ ಹಿಂದೆ ಬಿಜೆಪಿ ಸರ್ಕಾರದ ಒಳ ಸಂಚು ಇದೆ ಎಂದು ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. ಇದನ್ನೂ ಓದಿ : – ವಾಹನ ಸವಾರರೇ ಹುಷಾರ್..! – ನಾಳೆ ಬಂಕ್ ಗಳಲ್ಲಿ ಪೆಟ್ರೋಲ್ ಸಿಗಲ್ಲ ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!