ನಿರಂತರ ಮಳೆಯಿಂದಾಗಿ ಸೇತುವೆಯ ಮೇಲೆ ಮಳೆ ನೀರು ತುಂಬಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಚಾಲಕನೊಬ್ಬ ಬಸ್ ದಾಟಿಸಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಾಳ್ ತಿಮ್ಮಲಾಪುರದ ಬಳಿ ನಡೆದಿದೆ.
ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿತ್ತು. ಇದನ್ನೂ ಓದಿ : – ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ ರೋಣ ಅಗ್ನಿಶಾಮಕದಳದ ಸಿಬ್ಬಂದಿ
ಅರ್ಧ ಬಸ್ ಮುಳುಗೋವಷ್ಟು ನೀರು ಹರಿಯುತ್ತಿದ್ರೂ ಚಾಲಕ ಆ ಸೇತುವೆಯ ಮೇಲೆ ನೀರು ಇರುವುದನ್ನು ಲೆಕ್ಕಿಸದೇ ಬಸ್ ದಾಟಿಸಿದ್ದಾನೆ. ಬಸ್ ಚಾಲಕನ ದುಸ್ಸಾಹಸದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ನಿರಂತರ ಮಳೆ ಹಿನ್ನೆಲೆ- ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ