ಬೆಂಗಳೂರು : ರಾಜ್ಯದಲ್ಲಿ ನಡೆಯುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆ ಕಣ ರಂಗೇರಿದ್ದು, ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ.
ಚುನಾವಣೆ ಆಯೋಗವು ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನ ನಡೆಸಲು ಎಲ್ಲ ತಯಾರಿ ಮಾಡಿಕೊಂಡಿದೆ. ಪ್ರಚಾರ ಸಂದರ್ಭದಲ್ಲಿನ ಎಲ್ಲ ಅಕ್ರಮಗಳ ಮೇಲೂ ಕಣ್ಣಿಟ್ಟು ಪ್ರಕರಣ ದಾಖಲಿಸಿದೆ.
ಕ್ಷೇತ್ರದ ಮತದಾರರಲ್ಲದವರು ಸಂಜೆ 7 ರ ಒಳಗೆ ಆಯಾ ಕ್ಷೇತ್ರದಿಂದ ನಿರ್ಗಮಿಸಬೇಕು. ಇಲ್ಲದಿದ್ದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ತಮ್ಮ ತಮ್ಮ ಅಭ್ಯರ್ಥಿಗಳ ಪರಿವಾಗಿ ಮತದಾರರ ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು ನಡೆಸಿದ್ದ ಮೂರು ಪಕ್ಷದ ನಾಯಕರು ಆ ಕ್ಷೇತ್ರದಿಂದ ತೆರಳಿದ್ದು, ನಾಳೆಯಿಂದ ಮನೆ ಮನೆ ಪ್ರಚಾರಕ್ಕೆ ಅಭ್ಯರ್ಥಿಗಳು ಮುಂದಾಗಲಿದ್ದಾರೆ.