ಮೈಸೂರು: ಕೊರೋನಾಕ್ಕೆ ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ವಲಯ ಆಯುಕ್ತರ ಕಾರು ಚಾಲಕ ಹಾಗೂ ಮೇಯರ್ ಅವರ ದಫೇದಾರ್ ಅನಂತು ಮೃತ ದುರ್ದೈವಿಗಳು.
ಮೃತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಕ್ಕೆ ಇರುವವರು ಎಚ್ಚರವಹಿಸಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ವಲಯ ಆಯುಕ್ತರಿಗೆ ಪಾಸಿಟಿವ್ ಆಗಿತ್ತು. ಬಳಿಕ ಅವರ ಕಾರ್ ಚಾಲಕನಿಗೂ ಕೂಡಾ ಪಾಸಿಟಿವ್ ಆಗಿ ಗಂಭೀರವಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಮಹಾಪೌರರ ದಫೇದಾರ್ ಅನಂತುಗೂ ಕೂಡಾ ಪಾಸಿಟಿವ್ ಆಗಿತ್ತು. ಅವರೂ ಕೂಡಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಶೇ.90ರಷ್ಟು ಜನ ಹೋಮ್ ಐಸೋಲೇಷನ್ ಆಗಿದ್ದಾರೆ. ಹೋಮ್ ಐಸೋಲೇಷನ್ ಇರುವವರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಸೌಕರ್ಯ ಇಲ್ಲದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಪಾಲಿಕೆ ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.