ಯಡಿಯೂರಪ್ಪ ಒತ್ತಾಸೆಯಂತೆ ಮೇಲ್ಮನೆಗೆ ಬಿ.ವೈ ವಿಜಯೇಂದ್ರ ..!

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರಿಷತ್ ಪ್ರವೇಶಕ್ಕೆ ವೇದಿಕೆ ಸಿದ್ಧಗೊಳಿಸುವ ಯತ್ನ ಆರಂಭವಾಗಿದೆ.

Karnataka CM BS Yediyurappa plans lunch for staff amid exit talk |  Bengaluru News - Times of India

ಜೂನ್ 3 ರಂದು ವಿಧಾನಸಭೆಯಿಂದ ಮೇಲ್ಮನೆಯ 7 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ. ವಿಜಯೇಂದ್ರರಿಗೆ ವಿಧಾನ ಪರಿಷತ್ ಪ್ರವೇಶ ಕಲ್ಪಿಸಿ, ಸಚಿವ ಸಂಪುಟಕ್ಕೆ ಎಂಟ್ರಿ ಕೊಡಿಸುವ ಉದ್ದೇಶ ಯಡಿಯೂರಪ್ಪ ಅವರದ್ದಾಗಿದೆ. ಇದನ್ನೂ ಓದಿ : – ವಿಧಾನ ಪರಿಷತ್ತಿನ ಏಳು ಸ್ಥಾನಗಳಲ್ಲಿ ಬಿಜೆಪಿ ಶಾಸಕರಿಗೆ ನಾಲ್ಕು ಸ್ಥಾನಗಳು

ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಬೆಳಗ್ಗೆ ಯಡಿಯೂರಪ್ಪರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಈ ವಿಚಾರ ಪ್ರಸ್ತಾಪಿಸಿದ್ದು, ಪುತ್ರ ವಿಜಯೇಂದ್ರ ಮೇಲ್ಮನೆ ಪ್ರವೇಶಕ್ಕೆ ಒತ್ತಾಸೆಯಾಗಿ ನಿಲ್ಲುವಂತೆ ಸಲಹೆ ಮಾಡಿದ್ದಾರೆ.

ಇದನ್ನೂ ಓದಿ : – ದಾವೋಸ್ ಪ್ರವಾಸಕ್ಕೆ ತೆರಳುವ ವಿಚಾರ ಇಂದು ತೀರ್ಮಾನ ಮಾಡ್ತೀವಿ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!