ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣದಲ್ಲಿ ನಾನು ಹಿಂದಿನ ಹೇಳಿಕೆಗೆ ಬದ್ಧಳಾಗಿದ್ದು, ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾದುದು ಎಂದು ಸಿಡಿ ಯುವತಿ ಸ್ಪಷ್ಟನೆ ನೀಡಿದ್ದಾಳೆ.
ಸಿಡಿ ಪ್ರಕರಣದಲ್ಲಿ ಉಲ್ಟಾ ಹೊಡೆದ ಯುವತಿ, ಮರು ಹೇಳಿಕೆ ದಾಖಲಿಸಲು ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಯುವತಿ ಮಾಧ್ಯಮಗಳ ವರದಿಯನ್ನು ತಳ್ಳಿ ಹಾಕಿದಳು.
ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ. ನಿನ್ನೆ ಕೆಲ ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿದ್ದು, ಒತ್ತಡದಿಂದ ಹೇಳಿಕೆ ಕೊಟ್ಟಿದ್ದೆ ಅನ್ನೋದು ಸತ್ಯಕ್ಕೆ ದೂರವಾದದ್ದು. ನಾನು ಕೊಟ್ಟ ದೂರಿನ ಸಂಬಂಧ ಕೆಲ ಮಾಹಿತಿ ಒದಗಿಸಲು ಬಂದಿದ್ದೆ. ಅದಕ್ಕಾಗಿ ಸಮಯವಾಕಾಶ ಕೇಳಿ ಬಂದಿದ್ದೆನೆ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಎಸ್ಐಟಿ ರಮೇಶ್ ಅವರನ್ನು ವಿಚಾರಣೆಗೆ ಕರೆಯದಿರುವ ಬಗ್ಗೆ ಕೂಡ ದೂರು ನೀಡಿದ್ದೇನೆ. ಅವರು ಕರೊನಾ ಪೀಡಿತರಂತೆ ನಟಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ದ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.