ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ (HD.Revanna) ಮಾಡಿದ ಯಡವಟ್ಟು ಚುನಾವಣಾಧಿಕಾರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣಾಧಿಕಾರಿ ವಿಶಾಲಾಕ್ಷಿ (Vishalakshi) ಕ್ಲಿಯರೆನ್ಸ್ ಕೇಳಿದ್ದರು.
ಹರಿಯಾಣ ರಾಜ್ಯಸಭಾ ಚುನಾವಣೆಯಲ್ಲೂ (Haryana rajyasabha election) ಇದೇ ಸಮಸ್ಯೆಯಾಗಿತ್ತು. ಆಯೋಗದ ಸ್ಪಷ್ಟತೆಗಾಗಿ ಚುನಾವಣಾ ಅಧಿಕಾರಿಗಳು ಕಾಯುತ್ತಿದ್ರು. ಇದೀಗ ರೇವಣ್ಣ ಮತವನ್ನ ಕೇಂದ್ರ ಚುನಾವಣಾ ಆಯೋಗ ಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ : –ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ – ಎಸ್.ಆರ್ ಶ್ರೀನಿವಾಸ್