ನಯನತಾರಾ (Nayanthara) ಹಾಗೂ ವಿಘ್ನಶ್ ಶಿವನ್ (Vignesh shivan) ಜೂನ್ 9ರಂದು ಹೊಸ ಜೀವನ ಆರಂಭಿಸಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ (Mahabalipuram) ಈ ಜೋಡಿ ವಿವಾಹವಾಗಿದ್ದು ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುನ್ನುಡಿ ಬರೆದಿದ್ದಾರೆ.
ಈಗ ಸುದ್ದಿ ಏನಂದ್ರೆ ನಯತಾರಾ-ವಿಘ್ನೇಶ್ ಮದುವೆಯಲ್ಲಿ (Nayanthara Vignesh Shivan Wedding) ) ದುಬಾರಿ ಗಿಫ್ಟ್‌ಗಳು ಸಿಕ್ಕಿವೆ. ಸ್ವತಃ ನಯನತಾರಾ ಅವರು ಪತಿ ವಿಶ್ಲೇಶ್‌ಗೆ 20 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ನಯನತಾರ ಈ ಬಂಗಲೆ ಖರೀದಿಸಿ ವಿಘ್ನೇಶ್ ಹೆಸರಿಗೆ ಗುಟ್ಟಾಗಿ ನೋಂದಣಿ ಮಾಡಿಸಿದ್ದರು.
ವಿಘ್ಸೇಶ್ ಕೂಡ ನಯನತಾರಾಗೆ ದುಬಾರಿ ಗಿಫ್ಟ್ ನೀಡಿದ್ದಾರೆ. 5 ಕೋಟಿ ಮೌಲ್ಯದ ಡೈಮಂಡ್ ರಿಂಗ್ ನೀಡಿದ್ದಾರೆ ಎನ್ನಲಾಗಿದೆ. ಮದುವೆಯಲ್ಲಿ ನಯನತಾರಾ ಹಾಕಿದ್ದ ಒಡವೆ ಎಲ್ಲರ ಗಮನಸೆಳೆದಿತ್ತು. ಇದನ್ನ ವಿಘ್ನೇಶ್ ಶಿವನ್ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ. ಇದರ ಬೆಲೆ 2ರಿಂದ ಮೂರು ಕೋಟಿ ಎನ್ನಲಾಗಿದೆ. ಇದನ್ನೂ ಓದಿ : – ನಯನತಾರಾ ವಿಘ್ನೇಶ್ ಶಿವನ್ ಮದುವೆಯ ಫೋಟೋಗಳು ವೈರಲ್