ಸಾಮಾಜಿಕ ಜಾಲತಾಣದಲ್ಲಿ ಶೇ.25ರ ಲಾಭದ ಆಸೆ ತೋರಿಸಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಮತ್ತೊಂದು ಚೈನ್ ಲಿಂಕ್ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಸಿಸಿಬಿ ಪೊಲೀಸರು ಕಿಂಗ್ ಪಿನ್ ನನ್ನು ಬಂಧಿಸಿದ್ದಾರೆ.
ಸುಮಾರು 2 ಸಾವಿರ ಜನರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿ ವಂಚಿಸಿದ ಕಿಂಗ್ ಪಿನ್ ಡಿಎಸ್ ರಂಗನಾಥ್ ಎಂಬಾತನನ್ನು ಬಂಧಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಕಂಪನಿ ಬಗ್ಗೆ ಪ್ರಚಾರ ಮಾಡಿ, ಆನ್ ಲೈನ್ ನಲ್ಲೇ ರಿಜಿಸ್ಟರ್, ಆನ್ ಲೈನ್ ನಲ್ಲೇ ಹೂಡಿಕೆ, ಆನ್ ಲೈನ್ ನಲ್ಲೇ ಮೀಟಿಂಗ್ ಎಂದು ಸಾರ್ವಜನಿಕರಿಗೆ ವಂಚನೆ ಮಾಡಲಾಗುತ್ತಿತ್ತು.
ಗ್ರಾಹಕರು ಒಮ್ಮೆ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ ನಂತರ ಇಬ್ಬರನ್ನು ಸೇರಿಸಿದರೆ ಶೇ.1ರಷ್ಟು ಹೆಚ್ಚು ಬಡ್ಡಿ ಬರುತ್ತದೆ ಎಂದು ಆಮೀಷ ಒಡ್ಡಲಾಗುತ್ತಿತ್ತು. ಲಾಭದ ಆಸೆಗೆ ಬಿದ್ದ ಸಾರ್ವಜನಿಕರು ಲಕ್ಷಾಂತರ ರೂ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ.
ಸಾರ್ವಜನಿರಿಂದ ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಚರಣೆ ಗೆ ಇಳಿದಿದ್ದ ಸಿಸಿಬಿ ಪೊಲೀಸರು ಕಂಪನಿಯ ಕಿಂಗ್ ಪಿನ್ ಡಿಎಸ್ ರಂಗನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.