ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಗೆ ಬೃಹದಾಕಾರದ ಮರವೊಂದು ಕಾರಿನ ಮೇಲೆ ಬಿದ್ದಿದೆ. ವಿದ್ಯುತ್ ಕಂಬ ಬಿದ್ದ ಪರಿಣಾಮ ಕೂದಲೆಳೆಯ ಅಂತರದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ನಿಡುವಾಳೆ ಸಮೀಪ ಈ ಘಟನೆ ನಡೆದಿದೆ. ಮಳೆಬಂದ ಹಿನ್ನೇಲೆಯಲ್ಲಿ ಕೆಲಕಾಲ ಬಾಳೆಹೊನ್ನೂರು- ಕೊಟ್ಟಿಗೆಹಾರ ಮಾರ್ಗದ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾರಿನ ಮೇಲೆ ಮರ ಬಿದ್ದಿದ್ದರಿಂದ ಮುಂಭಾಗ ಜಖಂ ಆಗಿದೆ. ಮಂಜುನಾಥ್, ಕೃಷ್ಣ, ಸಚಿನ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ .
ಕಾರಿನ ಮುಂಭಾಗಕ್ಕೆ ಮರ ಬಿದ್ದಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ . ಹೆಮ್ಮಕ್ಕಿಯಿಂದ ಮಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದನ್ನು ಓದಿ : –ಆಸಿಡ್ ನಾಗನ ಮೇಲೆ ಕುಟುಂಬದವರ ಹಿಡಿಶಾಪ