ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸುವ ಕುರಿತು ಇ-ಕಾಮರ್ಸ್ ದೈತ್ಯ ಉದ್ಯಮಿ ಅಲಿಬಾಬಾ ಕಂಪನಿ ಮೇಲೆ 2.78 ಶತಕೋಟಿ ಡಾಲರ್ ಬೃಹತ್ ಮೊತ್ತದ ದಂಡವನ್ನು ಚೀನಾ ಸರಕಾರ ವಿಧಿಸಿದೆ.
ಮಾರ್ಕೆಟ್ ರೆಗ್ಯೂಲೆಷನ್ ಅಂಡ್ ಅಸ್ಸೆಸ್ಸೆಡ್ ಸೂಚನೆ ಮೇರೆಗೆ ಡಿಸೆಂಬರ್ ನಲ್ಲಿ ಆರಂಭಗೊಂಡಿದ್ದ ತನಿಖೆಯ ವರದಿ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಸ್ಥಳೀಯ ಪತ್ರಿಕೆ ಕ್ಸಿನ್ ವುಹಾ ತಿಳಿಸಿದೆ.
2019ರಲ್ಲಿ ಆಲಿಬಾಬಾ ಸಂಸ್ಥೆ ನಡೆಸಿದ್ದ 455.7 ಶತಕೋಟಿ ಡಾಲರ್ ವಹಿವಾಟು ನಡೆಸಿದ್ದು, ಇದರ ಮೇಲೆ ಶೇ.4ರಂತೆ ದಂಡ ವಿಧಿಸಲಾಗಿದೆ. ಇ-ಕಾಮರ್ಸ್ ವ್ಯವಹಾರದ ಮೂಲಕ ಇತರೆ ಸಂಸ್ಥೆಗಳ ಮೇಲೆ ಸೂಕ್ತವಲ್ಲದ ಮಾರುಕಟ್ಟೆ ನಿರ್ಮಾಣ ಮಾಡಿ ವಹಿವಾಟು ನಡೆಸಲಾಗಿತ್ತು. ಅಲ್ಲದೇ ಚೀನಾ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಬಹಿರಂಗವಾಗಿ ಟೀಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.