ಕೊರೊನಾ ವೈರಸ್ ಎಂಬ ಮಹಾಮಾರಿ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಮತ್ತೊಂದು ಸೋಂಕು ಕಾಣಿಸಿಕೊಂಡಿದೆ. ಇದುವರೆಗೆ ಪಕ್ಷಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಹಕ್ಕಿಜ್ವರ (ಎಚ್1ಒಎನ್3) ಇದೇ ಮೊದಲ ಬಾರಿಗೆ ಮನುಷ್ಯರ ದೇಹದಲ್ಲಿ ಪತ್ತೆಯಾಗಿದೆ.
ಜೆನ್ ಜಿಯಾಂಗ್ ನಗರದಲ್ಲಿ 41 ವರ್ಷದ ವ್ಯಕ್ತಿಯಲ್ಲಿ ಇದೇ ಮೊದಲ ಬಾರಿಗೆ ಪಕ್ಷಿಗಳಲ್ಲಿ ಕಂಡುಬರುತ್ತಿದ್ದ ಹಕ್ಕಿಜ್ವರ ಸೋಂಕು ಕಾಣಿಸಿಕೊಂಡಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯುಕ್ತ ಈ ವಿಷಯ ಬಹಿರಂಗಗೊಳಿಸಿದ್ದು, ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖಿತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೋಳಿ ಫಾರಂನಿಂದ ಈ ಸೋಂಕು ಮನುಷ್ಯರಿಗೆ ಹರಡಿದೆ ಎಂದು ಶಂಕಿಸಲಾಗಿದ್ದು, ಸೋಂಕಿನ ತೀವ್ರತೆ ಅತ್ಯಂತ ಕಡಿಮೆ ಇತ್ತು ಎಂದು ಅವರು ತಿಳಿಸಿದ್ದಾರೆ.