ಮಂಡ್ಯ: ಸಂಸದ ಅನಂತಕುಮಾರ್ ಹೆಗಡೆ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಿರುದ್ದ ಮಂಡ್ಯದಲ್ಲಿ ದೂರು ದಾಖಲಾಗಿದೆ.
ಮಂಡ್ಯದ ಕಾಗೆಹಳ್ಳದ ದೊಡ್ಡಿ ಗ್ರಾಮದ ಅನಿಲ್ ಗೌಡ ದೂರು ನೀಡಿದ ವ್ಯಕ್ತಿ. ನಿನ್ನೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಲಘುವಾಗಿ ಮಾತನಾಡಿದ್ದಾರೆ. ಅಲ್ಲದೆ ಹಿಂದು ಮುಸ್ಲಿಂ ವಿಚಾರವಾಗಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಆನಂದ್ ಅಸ್ನೋಟಿಕರ್ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ದೂರಿನಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ ಯಾರಾದರೂ ಹಿಂದು ಮುಸ್ಲಿಂ ಗಲಾಟೆ ನಡೆದು ಅದರಲ್ಲಿ ಹುಡುಗ ಸತ್ತರೆ ಆಗ ಅನಂತಕುಮಾರ್ ಹೆಗಡೆ ಹೊರ ಬರುತ್ತಾನೆ ಅಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.