ಕರ್ನಾಟಕ (KARNATAKA ) ಹಾಗೂ ತಮಿಳುನಾಡು (TAMI NADU ) ಒಂದು ಮಾಡಲು ಸಾಕಷ್ಟು ವಿಚಾರಗಳಿವೆ. ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿನಾಡು ಎಂದು ಬೇರ್ಪಡಿಸ್ತಿದ್ದಾರೆ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ (ANNAMALAI ) ಹೇಳಿದ್ದಾರೆ.
ಕೋಲಾರದ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿ ಬಳಿಕ ಮೇಕೆದಾಟು ವಿವಾದ ವಿಚಾರದ ಬಗ್ಗೆ ಮಾತನಾಡಿದ ಅವರು 2 ರಾಜ್ಯಗಳ ಮಧ್ಯೆ ಹಣ್ಣು ತರಕಾರಿಗಳ ವ್ಯಾಪಾರ ವಹಿವಾಟು ಚನ್ನಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಸಾಕಷ್ಟು ಜನ ತಮಿಳಿಗರು ಇಲ್ಲಿದ್ದಾರೆ. ಎರಡು ರಾಜ್ಯಗಳ ಮಧ್ಯೆ ಭಾಂಧವ್ಯ ಚೆನ್ನಾಗಿದೆ. ರಾಜಕೀಯ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಕಾವೇರಿ ವಿಚಾರ ತೆಗೆದು ಡಿವೈಡ್ ಮಾಡುತ್ತಿದೆ. ಮೇಕೆದಾಟು ವಿಚಾರ ಎಲ್ಲರಿಗೂ ಗೊತ್ತಿದೆ ಅದು ಇಬ್ಬರಿಗೂ ಅನ್ಯಾಯವಾಗದಂತೆ ತೀರ್ಮಾನ ಸಿಗಲಿದೆ.
ಎರಡು ರಾಜ್ಯಗಳನ್ನ ಒಂದು ಮಾಡಲು ಸಾಕಷ್ಟು ವಿಚಾರಗಳಿರುವಾಗ ಕಾಂಗ್ರೆಸ್ ಒಂದೆ ವಿಚಾರವನ್ನ ಕೈಗೆತ್ತಿಕೊಂಡು ಡಿವೈಡ್ ಮಾಡಲಾಗುತ್ತಿದೆ. ನಾನು ಯಾರ ಪರ, ಯಾರ ವಿರೋಧ ಇಲ್ಲ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ಮಾಡುತ್ತೆ. ತಮಿಳುನಾಡು ಮುಖ್ಯಮಂತ್ರಿ ಕರ್ನಾಟಕ ಮುಖ್ಯಮಂತ್ರಿ ಸ್ಪಷ್ಟವಾಗಿ ಇದ್ದಾರೆ ಎಂದು ತಿಳಿಸಿದ್ರು.
ಪಿಎಸ್.ಐ ಹಗರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು ತಮಿಳುನಾಡಿನ ರಾಜಕೀಯ ಸಭೆ ಸಮಾರಂಭಗಳಲ್ಲಿ ತುಂಬಾ ಬ್ಯುಸಿ ಇದ್ದೇನೆ. ಪಿಎಸ್.ಐ ಹಗರಣ ಕುರಿತು ನನಗೆ ಮಾಹಿತಿ ಇಲ್ಲ. ಅದರ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಆದ್ರೆ ಯಾರಿಗೂ ಅನ್ಯಾಯಗಬಾರದು ಎಂದು ಹೇಳಿದ್ರು.
ಇದನ್ನೂ ಓದಿ : – ಗೃಹ ಸಚಿವರ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿದ ಪ್ರಿಯಾಂಕ್ ಖರ್ಗೆ