ಕಾಂಗ್ರೆಸ್ ನವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ..ಇನ್ನು ನಾಡನ್ನು ಏನ್ ಕಟ್ತಾರೆ? – ನಳೀನ್ ಕುಮಾರ್ ಕಟೀಲ್ 

ಗಾಂಧಿಯವ್ರು ಸ್ವಾತಂತ್ರ್ಯ ನಂತರ ಭಾರತ ರಾಮರಾಜ್ಯ ಆಗಬೇಕು ಅಂದ್ರು. ಗಾಂಧಿ ಸ್ವಾತಂತ್ರ್ಯದ ನಂತರದ ಭಾರತ ಜಾತ್ಯಾತೀತ ಆಗಬೇಕು ಅನ್ನಲಿಲ್ಲ. ರಾಮನ ಭಾರತ ಆಗಲು ಪ್ರತೀ ವ್ಯಕ್ತಿ ರಾಮ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು  ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಕಾರ್ಯ ಆಗಬೇಕು.

For many in Karnataka BJP, new chief Nalin Kateel isn't popular or  influential enough

ಚಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಅಂತ ತೋರಿಸಿದ ಪಕ್ಷ ಬಿಜೆಪಿ.  ಮತಗಟ್ಟೆ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಇವತ್ತು ಕೇಂದ್ರದ ಗೃಹ ಸಚಿವ. ಹಳ್ಳಿಯಿಂದ ಬಂದವನೊಬ್ಬ ಸಾಮಾನ್ಯ ಬಿಜೆಪಿಯ ರಾಜ್ಯಾಧ್ಯಕ್ಷ ಆಗ್ತಾನೆ, ಮೂರು ಸಲ ಎಂಪಿ ಆಗ್ತಾನೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ.  ನಾವು ಪರಿವಾರವಾದದಿಂದ ಬಂದವರಲ್ಲ, ಹಣಬಲದಿಂದ ಬಂದವರಲ್ಲ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆಯಿಂದ ನಾವು ರಾಜಕೀಯಕ್ಕೆ ಬಂದವರು.  ಇದನ್ನೂ ಓದಿ : – ಕಾಂಗ್ರೆಸ್ ನವರು ಕರ್ನಾಟಕ ಹಾಗೂ ತಮಿನಾಡು ಎಂದು ಬೇರ್ಪಡಿಸ್ತಿದ್ದಾರೆ – ಅಣ್ಣಾಮಲೈ

Nalin Kumar Kateel takes charge as Karnataka BJP chief - The Economic Times

ಕಾಂಗ್ರೆಸ್ ನಲ್ಲಿ ಪದಾಧಿಕಾರಿಗಳ ಟೀಂ ಸಾಂವಿಧಾನಿಕವಾಗಿಲ್ಲ.ಕಾಂಗ್ರೆಸ್ ನಲ್ಲಿ ಅವ್ಯವಸ್ಥೆ ತುಂಬಿದೆ. ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಏನ್ ಕಟ್ತಾರೆ ಅವರು? ಕಾಂಗ್ರೆಸ್ ನಲ್ಲಿ 150 ಪ್ರಧಾನ ಕಾರ್ಯದರ್ಶಿ ಇದ್ದಾರೆ.  ಅದು ಮುಂದೆ 250 ದಾಟುತ್ತೆ ಎಂದು ಕಾಂಗ್ರೆಸ್ ವಿರುದ್ದ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ : ಗೃಹ ಸಚಿವರ ವಿರುದ್ದ ಟ್ವೀಟ್ ಮೂಲಕ ಕಿಡಿಕಾರಿದ ಪ್ರಿಯಾಂಕ್ ಖರ್ಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!