ಅಡುಗೆ ಅನಿಲ ದರ ಸಿಲಿಂಡರ್ ಗೆ 25.50 ರೂ. ಏರಿಕೆ ಮಾಡಲಾಗಿದೆ. ಇದರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ತತ್ತರಿಸುತ್ತಿರುವ ಜನತೆಗೆ ಮತ್ತೊಂದು ಬರೆ ಎಳೆದಂತಾಗಿದೆ.
ಜುಲೈ 1ರಿಂದ 14.2 ಕೆಜಿ ತೂಕದ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರ 25 ರೂ. ಏರಿಕೆ ಮಾಡಲಾಗಿದ್ದು, ಸಿಲಿಂಡರ್ ಬೆಲೆ ಇದೀಗ 834.50 ರೂ.ಗೆ ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಕಂಪನಿಗಳು ತಮ್ಮ ವೆಬ್ ಸೈಟ್ ನಲ್ಲಿ ನೂತನ ದರವನ್ನು ಪ್ರಕಟಿಸಿವೆ. 19 ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿ 76 ರೂ. ಏರಿಕೆ ಮಾಡಲಾಗಿದೆ.