ಕೊರೊನಾ ಕರ್ಫ್ಯೂ ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಇಂದು ಸಂಜೆ ರಾಜ್ಯ ಸರಕಾರ ಅಧಿಕೃತವಾಗಿ ಮಾರ್ಗಸೂಚಿ ಬಿಡುಗಡೆ ಮಾಡಿತು.
- ಮಾರ್ಗಸೂಚಿ ಮುಖ್ಯಾಂಶಗಳು
- ರಾತ್ರಿ 10 ಗಂಟೆಯಿಂದ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಮುಚ್ಚಿರಬೇಕು.
- ಹೋಮ್ ಡೆಲವರಿ, ಇ-ಕಾಮರ್ಸ್ ವಾಹನಗಳ ಸಂಚಾರಕ್ಕೆ ಅನುಮತಿ
- ರಾತ್ರಿ ವೇಳೆ ರೈಲು ಸಂಚಾರಕ್ಕೆ ಅನುಮತಿ
- ವಿಮಾನ ನಿಲ್ದಾಣಕ್ಕೆ ಹೋಗುವವರು ಬುಕ್ಕಿಂಗ್ ಟಿಕೆಟ್ ತೋರಿಸಬೇಕು
- ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ ನಿರ್ಬಂಧ ಇಲ್ಲ
- ನೌಕರರು ನೈಟ್ ಕರ್ಫೂ ಆರಂಭಕ್ಕೂ ಮುನ್ನ ಕಚೇರಿಯಲ್ಲಿರಬೇಕು
- ರಾತ್ರಿ ವೈದ್ಯಕೀಯ ಸೇವೆಗೆ ಮಾತ್ರ ಅವಕಾಶ
- ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ಈ ಮಾರ್ಗಸೂಚಿ ಅನ್ವಯ