ಆಕ್ಸಿಜನ್ ಪೈಪ್ ನಿಂದ ಕೊರೊನಾ ಸೋಂಕಿತ ಆಸ್ಪತ್ರೆಯ ಶೌಚಾಯಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಟ್ರಾಮ ಕೇರ್ ಸೆಂಟರ್ ನಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೈಸೂರಿನ ತನ್ವಿರ್ ಸೇಠ್ ನಗರದ ನಿವಾಸಿ ಕೊರೊನಾ ಸೋಂಕಿತ ದೇವರಾಜ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಎರಡು ದಿನಗಳ ಹಿಂದೆ ಕೋವಿಡ್ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇವರಾಜ, ಆಕ್ಸಿಜನ್ ಪಡೆಯುತ್ತಿದ್ದ ಪೈಪ್ ನಿಂದ ಶೌಚಾಲಯದ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.