ಚಾಮರಾಜನಗರ : ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆ, ಊಟ ಸರಿಯಿಲ್ಲಾ ಎಂಬುದೆಲ್ಲಾ ಮಾಯವಾಗಿ ಕೊರೊನಾ ಸೋಂಕಿತರು ಡ್ಯಾನ್ಸ್ ಮಾಡಿರುವ ಘಟನೆ ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ ಮತ್ತು ಗುಂಡ್ಲುಪೇಟೆಯ ಸಿಸಿ ಕೇಂದ್ರದಲ್ಲಿ ನಡೆದಿದೆ.
ಕೊರೊನಾ ಬಂದ ಕೂಡಲೇ ಪ್ರಪಂಚವೇ ಬಿದ್ದಂತೆ ಭೀತಿಗೊಳಗಾಗದೇ ಧೈರ್ಯದಿಂದ ಇದ್ದು ಗುಣಮುಖರಾಗಲು ಆತ್ಮಸ್ಥೈರ್ಯ ತುಂಬಲು ಆರೋಗ್ಯ ಸಿಬ್ಬಂದಿ ಮನರಂಜನೆಗೆ ಮೊರೆ ಹೋಗಿದ್ದು ಸೋಂಕಿತರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಮಹಿಳೆಯರಾದಿಯಾಗಿ ಬಹುಪಾಲು ಎಲ್ಲಾ ಸೋಂಕಿತರು ದಾದಿಯರ ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ.
ಗುಂಡ್ಲುಪೇಟೆ ಸಿಸಿ ಸೆಂಟರಿನಲ್ಲಿ ಹಳೆಯ ಹಾಡುಗಳಿಗೆ ಹಿರಿಯರು ವಯಸ್ಸನ್ನು ಲೆಕ್ಕಿಸದೇ ಪಂಚೆ ಎತ್ತಿ ಕಟ್ಟಿ ಕುಣಿದಿದ್ದು ಚಾಮರಾಜನಗರ ಸಿಸಿ ಕೇಂದ್ರದಲ್ಲಿ ಮಹಿಳೆಯರು, ಮಕ್ಕಳು ರಾಬರ್ಟ್ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.