ಟಾಲಿವುಡ್ ನಟ ಅಲ್ಲು ಅರ್ಜುನ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, ಕೊರೊನಾ ಪರೀಕ್ಷೆ ವರದಿಯಲ್ಲಿ ನನಗೆ ಪಾಸಿಟಿವ್ ಬಂದಿದೆ. ನಾನು ಮನೆಯಲ್ಲಿ ಐಸೊಲೇಷನ್ ಗೆ ಒಳಗಾಗಿದ್ದೇನೆ ಹಾಗೂ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಗಾಗಲು ವಿನಂತಿಸುತ್ತೇನೆ.
ನನ್ನ ಎಲ್ಲಾ ಹಿತೈಷಿಗಳೇ ಹಾಗೂ ನನ್ನ ಅಭಿಮಾನಿಗಳೇ ನನ್ನ ಬಗ್ಗೆ ಚಿಂತಿಸಬೇಡಿ. ನಾನು ಆರಾಮಾಗಿದ್ದೇನೆ ಎಂದು ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದ ಟೀಸರ್ ಅನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್ ಇದೀಗ 50 ಮಿಲಿಯನ್ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಸಿನಿಮಾವನ್ನು ತೆರೆಮೇಲೆ ವೀಕ್ಷಿಸಲು ಅಲ್ಲು ಅರ್ಜುನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.