ರಾಜ್ಯದಲ್ಲಿ ಒಂದು ದಿನದಲ್ಲಿ 5279 ಕೊರೊನಾ ಸೋಂಕು ಪ್ರಕರಣಗಳು ವರದಿಯಾದರೆ, ಬೆಂಗಳೂರಿನಲ್ಲಿ 3728 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸ್ಫೋಟ ಸಂಭವಿಸಿದೆ.
ರಾಜ್ಯ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದೇ ದಿನದಲ್ಲಿ 32 ಮಂದಿ ಸೋಂಕಿಗೆ ಬಲಿಯಾಗಿದ್ದರೆ, ಬೆಂಗಳೂರಿನಲ್ಲಿ 18 ಮಂದಿ ಅಸುನೀಗಿದ್ದಾರೆ. ಇದರಿಂದ ಒಟ್ಟಾರೆ ಸಾವಿನ ಸಂಖ್ಯೆ 12,657ಕ್ಕೆ ಜಿಗಿತ ಕಂಡಿದೆ.
ಒಂದು ದಿನದಲ್ಲಿ 1856ಮಂದಿ ಸೋಂಕಿನಿಂದ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 9,65,275ಕ್ಕೆ ಏರಿಕೆಯಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 10,20,0434ಕ್ಕೆ ಏರಿಕೆಯಾದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 42,483ಕ್ಕೆ ಜಿಗಿತ ಕಂಡಿದೆ.