ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3,26,098 ಲಕ್ಷ ಮಂದಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 3890 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,43,72,907ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 2,66,207ಕ್ಕೆ ತಲುಪಿದೆ.
ಸುಮಾರು ಒಂದು ತಿಂಗಳಿನಿಂದ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಸಮಾಧಾನದ ವಿಷಯ ಅಂದರೆ ಕಳೆದ ಕೆಲವು ದಿನಗಳಿಂದ 4 ಲಕ್ಷ ದಾಟಿದ್ದ ಸೋಂಕಿತರ ಸಂಖ್ಯೆ 3 ಲಕ್ಷದಷ್ಟು ಸೋಂಕು ಕುಸಿದಿದೆ. ಸಾವಿನ ಸಂಖ್ಯೆ ಕೂಡ 4 ಸಾವಿರ ಗಡಿ ದಾಟಿದ್ದು, ಇದೀಗ 4 ಗಡಿಯೊಳಗೆ ಬಂದಿದೆ.
ಒಂದು ದಿನದಲ್ಲಿ 3,53,299 ಮಂದಿ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 2,04,32,898ಕ್ಕೆ ಜಿಗಿತ ಕಂಡಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 36,73,802ಕ್ಕೆ ತಲುಪಿದೆ.