ಬೆಂಗಳೂರು : ಕೇರಳದಿಂದ ರೆಮ್ಡಿಸಿವೀರ್ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಸಂಜೀವ್ ಕುಮಾರ್ (32) ಪ್ರತೀಕ್ (37) ಹಾಗೂ ಅಭಿಜಿತ್ (20) ಬಂಧಿತ ಆರೋಪಿಗಳು.
ಈ ದಂಧೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದರು ಎನ್ನಲಾಗಿದ್ದು, ಆರೋಪಿಗಳು ಒಂದು ವಯಲ್ ಇಂಜೆಕ್ಷನ್ ಗೆ ಹತ್ತು ಸಾವಿರ ರೂ ಡಿಮ್ಯಾಂಡ್ ಮಾಡಿದ್ದರು.
ಅಭಿಜಿತ್ ಎಂಬಾತನ ಬಳಿ ಇಂಜೆಕ್ಷನ್ ಕಲೆಕ್ಟ್ ಮಾಡುವಂತೆ ತಿಳಿಸಲಾಗಿತ್ತು. ಇಂಜೆಕ್ಷನ್ ಪಡೆಯುವ ನೆಪದಲ್ಲಿ ತೆರಳಿದ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ವಯಲ್ಸ್ ರೆಮ್ಡಿಸಿವೀರ್ ವಶಕ್ಕೆಕ್ಕೆ ಪಡೆಯಲಾಗಿದೆ.