ಅಮೆರಿಕದಲ್ಲಿ ಶೇ.70ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ್ದರೂ ಪ್ರತಿದಿನ ಸರಾಸರಿ 1 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.
ಅಮೆರಿಕದಲ್ಲಿ ಡೆಲ್ಟಾ ವೈರಸ್ ಅಬ್ಬರ ಹೆಚ್ಚಾಗುತ್ತಿದ್ದು, ಕಳೆದ ಜೂನ್ ನಲ್ಲಿ 11 ಸಾವಿರ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಆಗಸ್ಟ್ ನಲ್ಲಿ 1,07,143 ಪ್ರಕರಣಗಳು ಪತ್ತೆಯಾಗುತ್ತಿವೆ.
ನವೆಂಬರ್ ನಲ್ಲಿ 1 ಲಕ್ಷ ಹಾಗೂ ಜನವರಿಯಲ್ಲಿ 2.5 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 1 ಲಕ್ಷ ಗಡಿ ದಾಟಲು 9 ತಿಂಗಳು ಪಡೆದಿತ್ತು. ಆದರೆ ಇದೀಗ ಒಂದೇ ದಿನದಲ್ಲಿ ಸೋಂಕು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಶೇ.70ರಷ್ಟು ಜನರಿಗೆ ಲಸಿಕೆ ಹಾಕಿದ್ದರೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅಮೆರಿಕವನ್ನು ಚಿಂತೆಗೀಡು ಮಾಡಿದೆ.