ಚಾಮರಾಜನಗರ : ಮೃತ ವೃದ್ಧನ ಶವವನ್ನು ತಮ್ಮ ಬೈಕ್ ನಲ್ಲಿಯೇ ಹೊತ್ತೊಯ್ದು ಶವ ಸಂಸ್ಕಾರ ನೆರವೇರಿಸಿದ ಕೊಳ್ಳೇಗಾಲ ಮುಸ್ಲಿಂ ಯುವಕರ ಮಾನವೀಯತೆಯ ಕೆಲಸಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ಬಂದಿದೆ. ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದ ಮಾದೇವ ಎಂಬುವರು ಸಹಜವಾಗಿ ಸಾವನ್ನಪ್ಪಿದ್ದರು.
ದುರ್ದೈವ ಅಕ್ಕ ಪಕ್ಕ ಮನೆಯವರೂ ಸಾವಿಗೆ ಕೊರೊನಾದ ಬಣ್ಣ ಹಚ್ಚಿ ಅಂತ್ಯ ಸಂಸ್ಕಾರಕ್ಕೂ ಹೆಗಲು ಕೊಡದಿದ್ದಾಗ ಮೃತನ ಅಣ್ಣನ ಮಗ ಲಕ್ಷ್ಮೀಕಾಂತ್ ಗೆ ದಿಕ್ಕುತೋಚದಾಗಿತ್ತು. ಅಷ್ಟರಲ್ಲಿ ಟಗರಪುರ ಗ್ರಾಮದ ಮುಖಂಡನೋರ್ವ ಕೊಳ್ಳೇಗಾಲ ಪಿಎಫ್ಐ ಯುವಕರಿಗೆ ಕರೆ ಮಾಡಿ ಅಂತ್ಯ ಸಂಸ್ಕಾರ ಸಹಕರಿಸುವಂತೆ ಕೆಳಿಕೊಂಡಿದ್ದಾರೆ.
ಕೂಡಲೇ ಸ್ಥಳಕ್ಕೆ 8 ಮಂದಿ ಮುಸ್ಲಿಂ ಯುವಕರ ತಂಡ ಬಂದು ಅಂತ್ಯ ಕ್ರಿಯೆ ಮಾಡಲು ಸಜ್ಜಾದ ತಂಡಕ್ಕೆ ಗ್ರಾಮಸ್ಥರಿಗೆ ಸ್ಮಶಾನಕ್ಕೆ ಶವ ಸಾಗಿಸಲು ಯಾವುದೇ ವಾಹನವಾಗಲಿ ಮತ್ತು ಜಾಗವಾಗಲಿ ಅವಕಾಶ ಕೊಡಲಿಲ್ಲ. ಕೊನೆಯದಾಗಿ ಸೈಕಲ್ ಕೇಳುದರು ಸ್ಪಂದಿಸಿಲ್ಲ. ಬಳಿಕ ಪಿಎಫ್ ಐ ಸಂಘಟನೆ ಕಾರ್ಯಕರ್ತರು
ತಾವು ಹೋಗಿದ್ದ ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಸಹಾಯದಿಂದ ಶವವನ್ನು ಹೊತ್ತೊಯ್ಯಲು ಮುಂದಾಗಿದ್ದಾರೆ. ಆದರೆ, ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ತಿಳಿದ ಗ್ರಾಮಾಂತರ ಠಾಣೆಯ ಪೋಲಿಸರಿಗೆ ತಿಳಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಗೋಮಾಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಪಿ ಎಫ್ ಐ ಸಂಘಟನೆ ಕೊಳ್ಳೇಗಾಲದ ನೂರ್ ಮೊಹಲ್ಲಾ ನಿವಾಸಿಗಳಾದ ಮತೀನ್, ಆಸಿಫ್, ಸಿದ್ದಿಕ್, ನಯೀಮ್ ಜಿಯಾವುಲ್ಲಾ ಮತ್ತಿತ್ತರರು ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.