ಇಂದು ಕಾಂಗ್ರೆಸ್ (Congress) ನವರಿಂದ ರಾಜಭವನ ಚಲೋ (Rajbhavan chalo) ವಿಚಾರಕ್ಕೆ ಸಚಿವ ಕೆ ಸುಧಾಕರ್ (K.Sudhakar) ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್(Covid) ಹೆಚ್ಚಳ ಆದರೆ ಅದಕ್ಕೆ ಅವ್ರೇ ಹೊಣೆ .
ಕಾಂಗ್ರೆಸ್ ನವರೇ ನೈತಿಕ ಹೊಣೆ ಹೊರಬೇಕು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಫ್ರೀಡಂ ಪಾರ್ಕ್ ನಲ್ಲಿ (Freedom park) ಮಾಡಲಿ. ಅದು ಬಿಟ್ಟು ಜನರನ್ನು ಸೇರಿಸಿಕೊಂಡು ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಅವ್ರು ಇವತ್ತು ರಾಜಭವನ ಚಲೋ ಮಾಡ್ತಿದ್ದಾರೆ ಇವತ್ತಿನ ಹೋರಾಟಕ್ಕೆ ಕೋವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಸಂಬಂಧ ಮುಖ್ಯಮಂತ್ರಿ ಗಳ ಜೊತೆ ಮಾತಾಡ್ತೇನೆ ಎಂದ ಹೇಳಿದರು. ಅಕ್ಟೋಬರ್ನಲ್ಲಿ (October) ಕೊರೋನಾ ಪೀಕ್ಗೆ ಹೋಗುತ್ತೆ ಎಂಬ ಐಐಟಿ ಕಾನ್ಪುರದ (IIT khanpur) ವರದಿ ವಿಚಾರಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ, ತಾಂತ್ರಿಕ ಸಲಹಾ ಸಮಿತಿ , IIT ಕಾನ್ಪುರದವರು ವರದಿ ನೀಡಿದ್ದಾರೆ. ಜೂನ್ ಮೂರನೆ ವಾರದಿಂದ ಅಕ್ಟೋಬರ್ವರೆಗೂ ಕರೋನಾ ಬರಬಹುದು ಎಂದು ವರದಿ ನೀಡಿದ್ದಾರೆ. ಈ ಹಿಂದೆ ಕೂಡ ಇವ್ರೇ ಪ್ರಿಡಿಕ್ಟ್ ಮಾಡಿ ವರದಿ ನೀಡಿದ್ರು. ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗ ಬರುತ್ತಿರುವ ಕೋವಿಡ್ ಪ್ರಭೇದ ಸೌಮ್ಯ ಲಕ್ಷಣ ಇರೋದ್ರಿಂದ .ಜನಸಾಮಾನ್ಯರು ಯಾವುದೇ ಆತಂಕ, ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ : – ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ED ವಿಚಾರಣೆಗೆ ವಿರೋಧ – ಕಾಂಗ್ರೆಸ್ ಪ್ರತಿಭಟನೆ
ಇದೇ ವೇಳೆ ಶಾಲೆಗಳಲ್ಲಿ(School) ಕೋವಿಡ್ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಒಂದೆರಡು ಶಾಲೆಗಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಆ ಶಾಲಾ ಮಕ್ಕಳಿಗೆ ರಜೆ ಕೊಟ್ಟಿದ್ದಾರೆ. ಈಗಾಗಲೇ ಸ್ಪಷ್ಟವಾದ ನಿಯಮಾವಳಿ ರೂಪಿಸಿದ್ದೇವೆ. ವಿದ್ಯಾರ್ಥಿಗಳಿಗೆ ಬರುವಾಗ ಥರ್ಮಲ್ ಸ್ಕ್ರೀನಿಂಗ್ (Thermal screening) ಮಾಡಿ, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗಳಲ್ಲಿ ಎಲ್ಲ ನಿಯಮ ಪಾಲನೆ ಮಾಡ್ತಿದ್ದಾರೆ ಎಂದು ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : – ಗುಜರಾತ್ ಬಳಿಕ ಕರ್ನಾಟಕದಲ್ಲೂ ಮೋದಿ ಹವಾ